ಬಂಟ್ವಾಳ ತಾಲೂಕು ಇರ್ವತ್ತೂರು ಗ್ರಾಮದ ಎಡ್ತೂರುಪದವಿನ ವಾಣಿಜ್ಯ ಸಂಕೀರ್ಣವೊಂದರ ಅಂಗಡಿಗಳಿಗೆ ಆಕಸ್ಮಿಕವಾಗಿ ಬೆಂಕಿಯ ಅವಗಢ ಸಂಭವಿಸಿ ಅಂಗಡಿಯಲ್ಲಿದ್ದ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ಸೋಮವಾರ ತಡ ರಾತ್ರಿ ನಡೆದಿದೆ.

1btl-Benki

ಇಲ್ಲಿಯ ಬಾಲಕೃಷ್ಣ ಶೆಟ್ಟಿ ಎಂಬವರಿಗೆ ಸೇರಿದ ಅನನ್ಯ ಕಾಂಪ್ಲೆಕ್ಸ್ನ ಅವರದೇ ದಿನಸಿ ಅಂಗಡಿ ಹಾಗೂ ಬೇಕರಿ ಸಹಿತ ಮೂರು ಅಂಗಡಿಗಳು ಸುಟ್ಟು ಭಸ್ಮವಾಗಿದೆ. ರಾತ್ರಿ 12 ರ ಬಳಿಕ ಈ ಬೆಂಕಿ ಅವಗಢ ಸಂಭವಿಸಿದ್ದು ಬೆಳಗ್ಗೆ ಬಾಲಕೃಷ್ಣ ಶೆಟ್ಟಿ ಅವರು ಅಂಗಡಿ ಬಾಗಿಲು ತೆರೆಯಲು ಬಂದಾಗಲಷ್ಟೇ ಘಟನೆ ಬೆಳಕಿಗೆ ಬಂದಿದೆ. ಅಂಗಡಿಗಳಲ್ಲಿದ್ದ ಎಣ್ಣೆ,ಧಾನ್ಯ,ಅಕ್ಕಿ, ತೆಂಗಿನಕಾಯಿ ಸಹಿತ ದಿನಸಿ ವಸ್ತುಗಳು ಮತ್ತು ಬೇಕರಿ ತಿಂಡಿ ತಿನಿಸುಗಳು, ತಂಪು ಪಾನೀಯಗಳು ಹಾಗೂ ಮರದ ಶೋಕೇಸ್,ಕೋಲ್ಡ್ ಸ್ಟೋರೇಜ್,ಟೇಬಲ್,ಕುಶನ್ ಚೇರ್,ಫ್ಯಾನ್ ಮತ್ತಿತರ ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟಿದೆ.

ಇದರಿಂದ ಸುಮಾರು 12 ಲಕ್ಷ ರೂ.ಗಳು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.ಆದರೆ ಬೆಂಕಿ ಅವಗಢಕ್ಕೆ ಕಾರಣ ತಿಳಿದು ಬಂದಿಲ್ಲ. ಕಂದಾಯ ಇಲಾಖೆ ಗ್ರಾಮ ಕರಣಿಕ ಕುಮಾರ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ

By suddi9

Leave a Reply

Your email address will not be published. Required fields are marked *