ಬಂಟ್ವಾಳ: ಜಿಲ್ಲೆಯ ಪ್ರಥಮ ನ್ಯಾಯಿಕ ಸೇವಾ ಕೇಂದ್ರವನ್ನು ದ.ಕ.ಜಿಲ್ಲಾ ಕಾನೂನು ಸೇವೆಗಳ ಪ್ರಾ„ಕಾರ ಅಧ್ಯಕ್ಷೆ, ಜಿಲ್ಲಾ ಮತ್ತು ಸತ್ರ ನ್ಯಾಯಾದೀಶೆ ಉಮಾ ಎಂ.ಜಿ. ಡಿ. 1ರಂದು ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಟೇಪ್ ಕತ್ತರಿಸಿ ಉದ್ಘಾಟಿಸಿದರು.
ಜಿಲ್ಲಾ ಸತ್ರ ನ್ಯಾಯಾಲಯ, ಹಿರಿಯ ಸಿವಿಲ್ ನ್ಯಾಯಾಧಿಶರು-ಜೆಎಂಎಫ್ ನ್ಯಾಯಾಲಯ ಬಂಟ್ವಾಳ, ವಕೀಲರ ಸಂಘ ಬಂಟ್ವಾಳ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಸತ್ರ ನ್ಯಾಯಾದೀಶೆ ಮಾತನಾಡುತ್ತಾ ಸುಮಾರು ಎರಡು ವರ್ಷಗಳಿಂದ ಈ ಸೌಲಭ್ಯ ವಿವಿಧ ಕಾರಣಗಳಿಂದ ತಡವಾಗಿತ್ತು. ಆಡಳಿತ ನ್ಯಾಯಮೂರ್ತಿಗಳ ಸೂಚನೆಯಂತೆ ಪ್ರಸ್ತುತ ಅದಕ್ಕೆ ಚಾಲನೆ ಸಿಕ್ಕಿದೆ. ಜನ ಸಾಮಾನ್ಯರಿಗೆ ತ್ವರಿತ ನ್ಯಾಯ ಸಿಗುವುದಕ್ಕೆ, ಅಲೆದಾಟ ತಪ್ಪಿಸುವ ಉದ್ದೇಶದಿಂದ ನ್ಯಾಯಿಕ ಸೇವಾ ಕೇಂದ್ರವನ್ನು ಅನುಷ್ಠಾನ ಮಾಡುತ್ತಿರುವುದಾಗಿ ನುಡಿದರು.
ಒಂದೇ ಕೌಂಟರ್ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ, ವಿಳಂಭಕ್ಕೆ ಇಲ್ಲಿ ಅವಕಾಶವಿಲ್ಲ. ಎಲ್ಲರಿಗೂ ಇದರ ಪ್ರಯೋಜನ ಆಗಲಿದೆ. ಆಧುನಿಕ ಕಂಪ್ಯೂಟರಿಕರಣ ವ್ಯವಸ್ಥೆಯನ್ನು ನ್ಯಾಯಾಂಗ ವ್ಯವಸ್ಥೆಯು ಆಳವಡಿಸಿಕೊಂಡು ತ್ವರಿತ ಸೇವೆ ನೀಡುವಲ್ಲಿ ವಕೀಲರು, ಸಿಬಂದಿಗಳು, ನ್ಯಾಯಾದೀಶರು ಎಲ್ಲರ ಸ್ಪಂದನ ಅಗತ್ಯ ಎಂದರು.
ಮುಂದಿನ ದಿನಗಳಲ್ಲಿ ಎಲ್ಲಾ ವಿವರಗಳನ್ನು ಕೇವಲ ಬೆರಳ ತುದಿಯಲ್ಲಿ ಪಡೆಯಲು ಸಾಧ್ಯವಾಗುವಂತೆ ಹಿಂಜರಿಕೆ ಇಲ್ಲದೆ ಒಗ್ಗಿಕೊಳ್ಳಬೇಕು. ಆನ್ಲೈನ್ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳಬೇಕು. ನಾಯ್ಯಾಂಗ ವ್ಯವಸ್ಥೆಯೂ ಬದಲಾವಣೆಯ ಹಾದಿಯಲ್ಲಿ ಮುನ್ನಡೆಯುವುದು ಅವಶ್ಯವಾಗಿದೆ. ಹಳೆಯ ಪ್ರಕರಣಗಳನ್ನು ಶೀಘ್ರ ಮುಕ್ತಾಯ ಮಾಡುವಂತೆ ಕೇಂದ್ರ ನ್ಯಾಯಾಲಯದ ನಿರ್ದೇಶನವಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾದೀಶ, ತಾಲೂಕು ಕಾನೂನು ಸೇವೆಗಳ ಅಧ್ಯಕ್ಷ ಚಂದ್ರಶೇಖರ್ ಯು. ಸ್ವಾತಿಸಿದರು. ಪ್ರಧಾನ ನ್ಯಾಯಾದೀಶ ತಾಲೂಕು ಸೇವೆಗಳ ಸದಸ್ಯ ಕಾರ್ಯದರ್ಶಿ ದೇವಾನಂದ ಕಾರ್ಯಕ್ರಮ ಸಂಘಟಿಸಿದ್ದರು.
ಹೆಚ್ಚುವರಿ ನ್ಯಾಯಾದೀಶ ಆರ್.ಮಹೇಶ್, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಹಾಯಕ ಸರಕಾರಿ ಅಭಿಯೋಜಕ ಎಂ. ಎಸ್. ಆಲಿ, ಸಹಾಯಕ ಸರಕಾರಿ ವಕೀಲ ಸತೀಶ್ ಕುಮಾರ್ ಶಿವಗಿರಿ, ತಾ.ಪಂ. ಕಾರ್ಯನಿರ್ವಾಹಕ ಅಬಕಾರಿ ಸಿಪ್ರಿಯನ್ ಮಿರಾಂದ, ಬಂಟ್ವಾಳ ಪುರಸಭಾ ಮುಖ್ಯಾ„ಕಾರಿ ಕೆ. ಸುಧಾಕರ ಭಟ್, ಬಂಟ್ವಾಳ ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ. ಬಂಟ್ವಾಳ ನಗರ ಎಸ್ಐ ನಂದಕುಮಾರ್, ಗ್ರಾಮಾಂತರ ಎಸ್ಐ ರಕ್ಷಿತ್, ಟ್ರಾಫಿಕ್ ಎಸ್ಐ ಚಂದ್ರಶೇಖರಯ್ಯ, ವಿಟ್ಲ ಎಸ್ಐ ಪ್ರಕಾಶ್ ದೇವಾಡಿಗ, ಸಿಡಿಪಿಒ ಇಲಾಖೆ ಅ„ಕಾರಿಗಳಾದ ಸುಧಾ ಜೋಶಿ ಮತ್ತು ಮಲ್ಲಿಕಾ ಪಾಲ್ಗೊಂಡಿದ್ದರು.
ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಪ್ರಸ್ತಾವನೆ ನೀಡಿದರು. ನ್ಯಾಯವಾದಿ, ಸಂಘದ ಕಾರ್ಯದರ್ಶಿ ಚಂದ್ರಶೇಖರ ಪುಂಚಮೆ ವಂದಿಸಿದರು. ನ್ಯಾಯವಾದಿ ನರೇಂದ್ರನಾಥ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.