ಬಂಟ್ವಾಳ: ತ್ಯಾಜ್ಯ ವಿಲೇವಾರಿ ಅಸಮರ್ಪಕತೆಯಿಂದಾಗಿ ಒಂದಲ್ಲ ಒಂದು ವಿವಾದಗಳಿಂದ ಸುದ್ದಿಯಾಗುತ್ತಿರುವ ಬಂಟ್ವಾಳ ಪುರಸಭೆ ಇದೀಗ ಮತ್ತೊಂದು ವಿವಾದವನ್ನು ಮೈಗೆಳೆದುಕೊಳ್ಳಲು ಸಿದ್ದತೆ ನಡೆಸುತ್ತಿದೆ. ಸಾರ್ವಜನಿಕರ ವಿರೋಧದ ನಡುವೆಯೇ ಲಯನ್ಸ್ ಸೇವಾ ಮಂದಿರದ ಬಳಿ ವಾಹನಗಳಿಗೆ ಕಸ ವರ್ಗಾವಣೆ ಮಾಡುವ ರ್ಯಾಂಪ್ ನಿರ್ಮಿಸುತಿದ್ದು ಇಲ್ಲಿನ ನಾಗರೀಕರ ಕೆಂಗಣ್ಣಿಗೆ ಗುರಿಯಾಗಿದೆ.
4
ಕಳೆದ ಹಲವಾರು ವರ್ಷಗಳಿಂದ ಬಿ.ಸಿ.ರೋಡಿನ ಮುಖ್ಯವೃತದ ಬಳಿ ಎರಡು ರಸ್ತೆಗಳು ಸಂದಿಸುವ ಜಾಗ ಬಂಟ್ವಾಳ ಪುರಸಭೆಯ ಅನಧಿಕೃತ ಡಂಪಿಂಗ್ಯಾರ್ಡ್ ಆಗಿ ಗುರುತಿಸಿಕೊಂಡಿದೆ. ಹಲವು ಬಾರಿ ಸಾರ್ವಜನಿಕರಿಂದ ವಿರೋಧ ಬಂದರೂ ಸಜೀಪ ನಡುವಿನ ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣವಾಗುವರೆಗೆ ಪ್ರತ್ಯೇಕ ವ್ಯವಸ್ಥೆಯೇ ಇಲ್ಲ ಎನ್ನುವ  ಸಮಾಜಾಯಿಷಿಕೆ ನೀಡಿಕೊಂಡು ಬಂದ ಪುರಸಭೆ ಇದೇ ಸ್ಥಳವನ್ನು ಕಸ ವಿಲೇವಾರಿಗೆ ಖಾಯಂಗೊಳಿಸಿತ್ತು.

ಆರಂಭದಲ್ಲಿ ಸಾರ್ವಜನಿಕರು ಇಲ್ಲಿ ಕಸ ಎಸೆಯುತ್ತಾರೆ ಎನ್ನುವ ದೂರುಗಳಿತ್ತು, ಕ್ರಮೇಣ ಪುರಸಭೆಯೇ ಮನೆಮನೆಯಿಂದ ಸಂಗ್ರಹಿಸಿ ತಂದ ತ್ಯಾಜ್ಯವನ್ನು ಟ್ರಾಕ್ಟರ್ನಿಂದ ಲಾರಿಗೆ ವರ್ಗಾಯಿಸಲು ಇದೇ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಲ್ಲದೆ ಲಾರಿಗೆ ತುಂಬಿ ಹೆಚ್ಚುವರಿಯಾಗಿ ಉಳಿದ ಕಸವನ್ನು ಇಲ್ಲೇ ರಾಶಿ ಹಾಕಿ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿತ್ತು. ಇದೀಗ ಅದೇ ಸ್ಥಳದಲ್ಲಿ ಸಾರ್ವಜನಿಕ ಉದ್ಯಾನವನ ನಿರ್ಮಾಣಗೊಳ್ಳುತ್ತಿರುವುದರಿಂದ ಕಸ ವರ್ಗಾವಣೆಯನ್ನು ಆ ಸ್ಥಳದಿಂದ ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಲು ಚಿಂತನೆ ನಡೆಸಿದ ಪುರಸಭೆ ಪೆಲತ್ತಿಮಾರ್ಗೆ ಹೋಗುವ ರಸ್ತೆ ಬಳಿಯ ಸ್ಥಳವನ್ನು ಆಯ್ಕೆ ಮಾಡಿಕೊಂಡು ರ್ಯಾಂಪ್ ನಿಮಿಸಲು ಮುಂದಾದಾಗ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತ ಪಡಿಸಿದ್ದರು. ಅಲ್ಲಿಂದಲೂ ತೆರಳಿದ ಪುರಸಭೆ ಇದೀಗ ಲಯನ್ಸ್ ಕ್ಲಬ್ ಬಳಿ ಸ್ಥಳ ಗುರುತಿಸಿ ರ್ಯಾಂ ನಿರ್ಮಾಣ ಕಾರ್ಯ ನಡೆಸುತ್ತಿದೆ.

ಇದೀಗ ರ್ಯಾಂಪ್ ನಿಮಿಸಲು ಆಯ್ದು ಕೊಂಡ ಸ್ಥಳಕ್ಕೂ ಸಾರ್ವಜನಿಕರ ವಿರೋಧ ವ್ಯಕ್ತವಾಗಿದೆ. ಅದೇ ಪರಿಸರದಲ್ಲಿ ರಿಕ್ಷಾ ಭವನ, ಲಯನ್ಸ್ ಸೇವಾ ಮಂದಿರಗಳು ಇವೆ. ವಾರದ ಹೆಚ್ಚಿನ ದಿನಗಳಲ್ಲಿ ಈ ಸಭಾಭವನದಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುವೆ. ಇಲ್ಲಿ ರ್ಯಾಂಪ್ ನಿರ್ಮಿಸಿದರೆ ಇಲ್ಲಿಗೆ ಆಗಮಿಸುವ ಜನರಿಗೆ ದುರ್ವಾಸನೆಯಿಂದಾಗಿ ತೊಂದರೆ ಉಂಟಾಗುತ್ತದೆ ಎನ್ನುವುದು ಇವರ ಆರೋಪ. ಇಲ್ಲಿ ಕಸ ಹಾಕದಂತೆ ಈ ಹಿಂದೆಯೇ ಲಯನ್ಸ್ ಕ್ಲಬ್ ವತಿಯಿಂದ ಪುರಸಭೆಗೆ ಮನವಿ ಸಲ್ಲಿಸಲಾಗಿತ್ತು. ಇದೀಗ ಪುರಸಭೆಯೇ ಇಲ್ಲಿ ರ್ಯಾಂಪ್ ನಿಮರ್ಿಸಲು ಮುಂದಾಗಿರುವುದು ವಿಪಯರ್ಾಸ ಎನ್ನುವ ಮಾತುಗಳು ಕೇಳಿ ಬಂದಿದೆ.

ಗೂಡಿನ ಬಳಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇದ್ದು ಇಲ್ಲಿನ ವಿದ್ಯಾರ್ಥಿಗಳು ಪ್ರತಿನಿತ್ಯ ಇದೇ ಸ್ಥಳದಿಂದ ನಡೆದುಕೊಂಡು ಹೋಗುತ್ತಾರೆ. ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೂ ಇದೇ ಸ್ಥಳವನ್ನು ದಾಟಿಕೊಂಡು ಬರಬೇಕಾಗಿದೆ. ಬಿ.ಸಿ.ರೋಡಿನಿಂದ ಪಾಣೆಮಂಗಳೂರು ಪೇಟೆ ಮೂಲಕ ಹೋಗುವ ಬಸ್ಸು, ರಿಕ್ಷಾ ಮತ್ತಿತರ ವಾಹನಗಳು ಇದೇ ಹಾದಿಯನ್ನು ಅವಲಂಬಿಸ ಬೇಕಾಗಿದೆ. ಸ್ಥಳೀಯಾಡಳಿವೇ ಸಾರ್ವಜನಿಕರು ನಡೆದಾಡುವ ಪರಿಸರದಲ್ಲಿ ಕಸ ವಿಲೇವಾರಿಗೆ ಅವಕಾಶ ನೀಡಿದರೆ ಜನರು ತಮ್ಮ ದೂರನ್ನು ಯಾರಿಗೆ ಸಲ್ಲಿಸ ಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಆರಮಭದಲ್ಲಿ ರ್ಯಾಂಪ್ ಮಾತ್ರ ನಿರ್ಮಿ ಸುತ್ತೇವೆ ಎನ್ನುವ ಪುರಸಭೆ ಬಳಿಕ ಇದೇ ಸ್ಥಳದಲ್ಲಿ ಕಸವನ್ನು ಡಂಪಿಂಗ್ ಮಾಡುತ್ತಾರೆ ಎನ್ನುವ ದೂರು ಸಾರ್ವಜನಿಕರದ್ದು. ಸಾರ್ವಜನಿಕ ಸ್ಥಳದಲ್ಲಿ ರ್ಯಾಂಪ್ ಮಾಡಿ ಜನರಿಗೆ ತೊಂದರೆ ನೀಡುತ್ತಿರುವ ಪುರಸಭೆ ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಿಸಿ ಕಸ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು ಯಾಕೆ ಆಸಕ್ತಿ ತೋರುತ್ತಿಲ್ಲ ಎನ್ನುವ ಸಾರ್ವಜನಿಕರ ಪ್ರಶ್ನೆಗೆ ಪುರಸಭೆ ಆಡಳಿತವೇ ಉತ್ತರ ನೀಡ ಬೇಕಾಗಿದೆ.

By suddi9

Leave a Reply

Your email address will not be published. Required fields are marked *