ಬಜಪೆ: *ಏಕತೆ ಹಾಗೂ ಬಾಂಧವ್ಯ ವೃದ್ಧಿಸುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಸಾಮೂಹಿಕ ಕಳಕಳಿ ಮೂಡಿಸುವಲ್ಲಿ ಹಾಗೂ ವ್ಯಕ್ತಿತ್ವದ ವಿಕಸನಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಬಹಳ ಸಹಕಾರಿ.* ಎಂದು ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪಾಲಿಟೆಕ್ನಿಕ್ ಪ್ರಿನ್ಸಿಪಾಲ್ ಶಶಿಪ್ರಭಾ ಎನ್. ಅವರು ಹೇಳಿದರು.

9vm Porkodi (2)

9vm Porkodi (1)
ಪೊರ್ಕೋಡಿ ಶ್ರೀ ಸೋಮನ್ನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಾರಂಭಗೊಂಡ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಶ್ರೀ ಸೋಮನಾಥೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ದಯಾನಂದ ಪ್ರಸಾಧ್ ಅವರು ಶಿಬಿರವನ್ನು ಉದ್ಘಾಟಿಸಿದರು.
ಶ್ರೀ ನಿರಂಜನ ಸ್ವಾಮಿ ಸಮೂಹ ಸಂಸ್ಥೆಗಳ ಟ್ರಸ್ಟಿ ಎನ್.ನಾರಾಯಣ ಪೂಜಾರಿ,ಉಪನ್ಯಾಸಕ ಕುಮಾರ ಸ್ವಾಮಿ ಕೋಡ್ದಬ್ಬು ದೈವಸ್ಥಾನ ಸಮಿತಿಯ ಜಗನ್ನಾಥ ಸಲ್ಯಾನ್ ಮುಂತಾದವರು ಉಪಸ್ಥಿತರಿದ್ಧರು.
ಎನ್ನೆಸ್ಸೆಸ್ ಯೋಜನಾಕಾರಿ ಸಂಧ್ಯಾ ಕುಳಾಯಿ ನಿರೂಪಿಸಿದರು. ದೇವರಾಜ್ ನಾಯ್ಕ್ ಸ್ವಾಗತಿಸಿದರು. ಹೇಮಚಂದ್ರ ವಂದಿಸಿದರು.

By suddi9

Leave a Reply

Your email address will not be published. Required fields are marked *