ಬಂಟ್ವಾಳ : ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜಿಪ ಮುನ್ನೂರು ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಕೆ.ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಗಣಪತಿ ಹೋಮ, ಬಿಂಬ ಶುದ್ಧಿ, ಸಾನಿಧ್ಯ ಕಲಶಪೂಜೆ, ಸಾನಿಧ್ಯ ಕಲಶಾಭಿಷೇಕ, ಪಂಚಾಮೃತ ಅಭಿಷೇಕ ಸಹಿತ ಆಶ್ಲೇಷ ಬಲಿಹೋಮ ಆಶ್ಲೇಷ ಬಲಿ ಪೂಜೆ ಜರಗಿತು.


ಉತ್ಸವ ಸಮಿತಿ ಅಧ್ಯಕ್ಷ ಜಯಶಂಕರ ಬ್ರಾಸಿತ್ತಾಯ, ಗೌರವಾಧ್ಯಕ್ಷ ಎಮ್.ಮಹಾಬಲ ಕೊಟ್ಟಾರಿ, ಅಧ್ಯಕ್ಷ ಶಿವರಾಮ ಮಯ್ಯ, ಆಡಳಿತಾಧಿಕಾರಿ ನಮಿತಾ, ಸದಸ್ಯರುಗಳಾದ ಎನ್.ಕೆ.ಶಿವ ಖಂಡಿಗ, ದೇವಪ್ಪ ಮಡಿವಾಳ, ಶ್ರೀನಿವಾಸ ನಾಯಕ್, ಬಬಿತಾ ಸೋಮಶೇಖರ , ಹರಿಪ್ರಸಾದ್ ಭಂಡಾರಿ, ಚಿತ್ರಾ ಎಸ್ ರೈ, ಸುಬ್ರಹ್ಮಣ್ಯ ಭಟ್, ಅರ್ಚಕ ಕೃಷ್ಣ ಭಟ್ , ಶಶೀರಾಜ ರಾವ್, ಅನಂತ ಉಪಾಧ್ಯಾಯ , ಸುಬ್ರಾಯ ಕಾರಂತ್, ಧನಂಜಯ ಶೆಟ್ಟಿ, ಎನ್, ರಾಜಶೇಖರ ನಾಯಕ್, ಪರಮೇಶ್ವರ ಎಂ., ನವೀನ್ ಸುವರ್ಣ, ರವೀಂದ್ರ ಕಂಬಳಿ, ಧನೇಶ್ವರ ರಾವ್ ಉಪಸ್ಥಿತರಿದ್ದರು.
