ಬಂಟ್ವಾಳ: ಶಿಕ್ಷಣ ಕ್ಷೇತ್ರದಲ್ಲಿ ಮೌನ ಕ್ರಾಂತಿಯ ಮೂಲಕ ನಿಸ್ವಾರ್ಥ ಸೇವೆ ನೀಡುತ್ತಿರುವ ಕರಂಕೆ ಶ್ರೀ ದುರ್ಗಾ ಫ್ರೆಂಡ್ಸ್ನ ಕಾರ್ಯ ಸಮಾಜದ ಎಲ್ಲಾ ಸಂಘ ಸಂಸ್ಥೆಗಳಿಗೂ ಮಾದರಿಯಾದುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಹೇಳಿದರು.
ಮೂಡುನಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ನ ನೇತೃತ್ವದಲ್ಲಿ ಊರವರ ಸಹಕಾರದೊಂದಿಗೆ ಬರಿಮಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದುರ್ಗಾ ಫ್ರೆಂಡ್ಸ್ನ ಸಮಾಜ ಸೇವೆ ನಿಜವಾಗಿಯೂ ವಿಶಿಷ್ಟವಾದುದು. ಶ್ರಮದಾನಕ್ಕೆ ನಿಜವಾದ ಅರ್ಥವನ್ನು ಅವರು ಕೊಟ್ಟಿದ್ದಾರೆ. ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಶಿಕ್ಷಣ ಕೇಂದ್ರಗಳನ್ನು ಕಟ್ಟುವ ಅವರ ಸಮಾಜಮುಖಿ ಕಾರ್ಯಕ್ಕೆ ಊರವರು ಪ್ರೋತ್ಸಾಹ ನೀಡಬೇಕು, ದುರ್ಗಾ ಫ್ರೆಂಡ್ಸ್ ಕ್ಲಬ್ ಶೈಕ್ಷಣಿಕ ಕ್ರಾಂತಿಗೆ ಇಲಾಖೆಯ ವತಿಯಿಂದ ಸಂಪೂರ್ಣ ಸಹಕಾರ ನೀಡಿಲಿದ್ದು ಈ ಕೆಲಸ ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು.
BTW_DCE18_1
ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ ಸರ್ಕಾರಿ ಶಾಲೆಯ ಬಗ್ಗೆ ನಮಗಿರುವ ನಕರಾತ್ಮಕ ಅಂಶಗಳು ದೂರವಾಗಬೇಕು. ರಾಜಕೀಯದಿಂದಾಗಿ ಶಾಲೆಗಳು ಕಡೆಗಣಿಸಲ್ಪಡುತ್ತಿದೆ, ರಾಜಕೀಯವನ್ನು ಹೊರಗಿಟ್ಟೇ ಶಾಲೆಯ ಅಂಗಣವನ್ನು ಪ್ರವೇಶಿಸಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳು ಸಮಗ್ರ ಅಭಿವೃದ್ದಿ ಸಾಧಿಸಲು ಸಾಧ್ಯ ಎಂದರು. ಜ. 2ರಂದು ಶಾಲಾ ವಾರ್ಷಿಕೋತ್ಸವ ನಡೆಯಲಿದ್ದು ಈ ಸಂದರ್ಭ ಪಂಚಾಂಗ ನೆರವೇರಿಸಿ ಲಿಂಟಲ್ ಹಂತದವರೆಗೆ ಕಾಮಗಾರಿ ಮುಗಿಸುವ ಭರವಸೆ ನೀಡಿದರಲ್ಲದೆ ಮುಂದಿನ ಎರಡು ಮೂರು ತಿಂಗಳೊಳಗಾಗಿ ನೂತನ ಶಾಲಾ ಕಟ್ಟಡ ನಿರ್ಮಾ ಣಗೊಳ್ಳಲಿದೆ ಎಂದರು.

ಬರಿಮಾರು ಗ್ರಾಮಪಂಚಾಯಿತಿ ಅಧ್ಯಕ್ಷ ವಸಂತ ಪಟ್ಲಕೋಡಿ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಕ ಗಂಗಾಧರ ಶೇರಾ, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಯಶೋಧಾ, ಪ್ರಮುಖರಾದ ಪೂವಪ್ಪ ಮೆಂಡನ್, ಪೂವಪ್ಪ ಪೂಜಾರಿ, ಜಗದೀಶ, ಸದಾಶಿವ ವೇದಿಕೆಯಲ್ಲಿ ಹಾಜರಿದ್ದರು.
ಶ್ರೀದುರ್ಗಾ ಫ್ರೆಂಡ್ಸ್ ಕ್ಲಬ್ನ ಪದಾಧಿಕಾರಿಗಳಾದ ವಿಠಲ ಡಿ, ನವೀನ್ ಸೇಸಗುರಿ, ರಾಮಚಂದ್ರ ಕರೆಂಕಿ, ಪ್ರಮೋದ್ ಕರೆಂಕಿ, ಯಶೋಧರ ರಾಮನಗರ ಗಣೇಶ್ಗೌಡ, ಶಿವಪ್ರಸಾದ್, ಗ್ರಾ.ಪಂ.ಸದಸ್ಯರು, ಶಾಲಾಭಿವೃದ್ದಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಕಲ್ಯಾಣಿ ಜಿ.ಸ್ವಾಗತಿಸಿದರು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಉಮೇಶ್ ಪಿ. ವಂದಿಸಿದರು, ಪುರುಷೋತ್ತಮ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *