ಮುಂಬಯಿ, : ಜಿ.ಎಸ್.ಬಿ ಸಭಾ ದಹಿಸರ್-ಬೊರಿವಲಿ (ರಿ.) ಇದರ 30ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ, ವಾರ್ಷಿಕ ಸ್ನೇಹಮಿಲನ ಮತ್ತು ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಡಿ.25ನೇ ಶುಕ್ರವಾರ ದಹಿಸರ್ ಪೂರ್ವದ ಎನ್.ಎಲ್ ಕಾಂಪ್ಲೆಕ್ಸ್ ಹತ್ತಿರದ ಸಾರಸ್ವತ ಕಲ್ಚರಲ್ ಮತ್ತು ರಿಕ್ರಿಯೇಷನ್ ಸೆಂಟರ್ ಮೈದಾನದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿಸಲಾಗುವುದು ಎಂದು ಅಧ್ಯಕ್ಷ ಕೆ.ಆರ್.ಮಲ್ಯ ಹಾಗೂ ಉಪಾಧ್ಯಕ್ಷೆ ಮೋಹಿನಿ ಎಸ್.ಶ್ಯಾನ್‍ಭಾಗ್ ತಿಳಿಸಿದ್ದಾರೆ.
ಕಾರ್ಯಕ್ರಮಗಳ ಸಲುವಾಗಿ ಅಂದು ಬೆಳಿಗ್ಗೆ 9.00 ಗಂಟೆಯಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಬಳಿಕ ವ್ಯಾಸೋಪನ, 10.00 ಗಂಟೆಯಿಂದ ಮಧ್ಯಾಹ್ನದ ವರೇಗೆ ಶ್ರೀ ಸುಧೀಂದ್ರ ನಗರ ಭಜನಾ ಮಂಡಳಿ ದಹಿಸರ್ ಸಂಸ್ಥೆಯಿಂದ ಭಜನೆ, ಮಧ್ಯಾಹ್ನದ12.00 ಗಂಟೆಗೆ ಮಹಾ ಆರತಿ ಮತ್ತು ತೀರ್ಥ ಪ್ರಸಾದ ವಿತರಣೆ, ಅಪರಾಹ್ನ 10.00 ಗಂಟೆಯಿಂದ ಸಮಾರಾಧನೆ, 2.00 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ 5.00 ಗಂಟೆಯಿಂದ ವಾರ್ಷಿಕ ಸ್ನೇಹಮಿಲನ ಮತ್ತು ವಿವಿಧ ಗಣ್ಯರ ಸಮ್ಮುಖದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಈ ಸಂದರ್ಭದಲ್ಲಿ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಜತೆ ಕಾರ್ಯದರ್ಶಿಗಳಾದ ಸಾಣೂರು ಮನೋಹರ್ ವಿ.ಕಾಮತ್ ಮತ್ತು ಆರ್.ವಿ ಶೆಣೈ ತಿಳಿಸಿದ್ದಾರೆ.
ದಿನಪೂರ್ತಿ ಅನೇಕ ಸೇವೆಗಳು, ಸಂತಾರ್ಪಣಾ ಸೇವೆ, ಅನ್ನದಾನ ಸೇವೆ, ಸಹಸ್ರನಾಮ ಸೇವೆ, ಮಹಾಪೂಜೆಗಳ ಸೇವೆಗಳು ನಡೆಯಲಿದ್ದು ಸೇವಾಥಿರ್üಗಳು ಸಹಕರಿಸುವಂತೆ ಹಾಗೂ ಸ್ಥಾನೀಯ ಸಮಾಜ ಬಾಂಧವರು ಆಗಮಿಸಿ ಸದುಪಯೊಗ ಪಡೆಯಬೇಕಾಗಿ ಗೌ| ಪ್ರ| ಕಾರ್ಯದರ್ಶಿ ಎಂ.ಯು ಪಡಿಯಾರ್ ಈ ಮೂಲಕ ವಿನಂತಿಸಿದ್ದಾರೆ.
