ಎಲ್ಲಾ ಜಾತಿ ಬಾಂಧವರೊಂದಿಗೆ ಬಂಟರದ್ದು ಉತ್ತಮ ಒಡನಾಟ: ಅಜಿತ್ ಕುಮಾರ್ ರೈ
ಮಂಗಳೂರು: ಎಲ್ಲಾ ಜಾತಿ ಬಾಂಧವರೊಂದಿಗೆ ಸಾಮರಸ್ಯ ಜೀವನವನ್ನು ನಡೆಸಿಕೊಂಡು ಬಂದವರು ಬಂಟರು. ಹಿರಿಯರ ದೂರದೃಷ್ಟಿಯಿಂದ ಬಂಟರ ಸಂಘಗಳ ಸ್ಥಾಪನೆಯಾಗಿದೆ. ಹಿರಿಯರನ್ನು ನೆನೆದು ಅವರಿಗೆ ಗೌರವ ನೀಡಿ ಬಂಟರು ಎಲ್ಲಾ ಜಾತಿ ಮತ ಬಾಂಧವರೊಂದಿಗೆ ಉತ್ತಮ ಒಡನಾಟವನ್ನು ಇರಿಸಿ ಮುನ್ನಡೆಯಬೇಕೆಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ಕುಮಾರ್ರೈ ಹೇಳಿದರು.
ಸುರತ್ಕಲ್ ಬಂಟರ ಸಂಘದ ವತಿಯಿಂದ ಬಂಟರ ಭವನದಲ್ಲಿ ನಡೆದ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕøತಿಕವಾಗಿ ಇವತ್ತು ಬಂಟರ ಸಂಘಗಳು ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುತ್ತಿದೆ ಎಂದು ಅಜಿತ್ಕುಮಾರ್ ರೈ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಸಂತೋಷ್ ಐತಾಳ, ಉರ್ಬಾನ್ ಪಿಂಟೊ ಹಾಗೂ ಪತ್ರಕರ್ತ ಲೋಕೇಶ್ ಸುರತ್ಕಲ್ ಇವರನ್ನು ಸನ್ಮಾನಿಸಲಾಯಿತು. ಆಟೋಟ ಸ್ಫರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇಡ್ಯಾ ಗ್ರಾಮ ಚಾಂಪಿಯನ್ ಟ್ರೋಫಿ ಪಡೆದುಕೊಂಡಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಮಾತೃಸಂಘದ ಮಂಗಳೂರು ತಾಲೂಕು ಸಮಿತಿ ಸಂಚಾಲಕ ಜಯರಾಮ ಸಾಂತ, ಉಪಾಧ್ಯಕ್ಷ ಉಮೇಶ್ ರೈ, ಕಾವೂರು ಬಂಟರ ಸಂಘದ ಅಧ್ಯಕ್ಷ ಎಂ.ಎಸ್.ಶೆಟ್ಟಿ, ಉದ್ಯಮಿ ಸಂತೋಷ್ ಶೆಟ್ಟಿ, ಮಹಿಳಾ ವೇದಿಕೆ ಅಧ್ಯಕ್ಷೆ ಆಶಾ ಆರ್. ಶೆಟ್ಟಿ, ಸಂಘದ ಉಪಾಧ್ಯಕ್ಷ ಸುಧಾಕರ ಪೂಂಜಾ, ಕಾರ್ಯದರ್ಶಿ ಸೀತಾರಾಮ ರೈ, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು. ಜ್ಯೋತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ರಕ್ಷಿತ್ ಶೆಟ್ಟಿ ಪಡ್ರೆ ನಿರ್ದೇಶನದಲ್ಲಿ ಯಕ್ಷ-ಗಾನ-ನಾಟ್ಯ ವೈಭವ ಜರಗಿತು.
