ಬಜಪೆ: ಬಂಟರ ಸಂಘ ಬಜಪೆ ವಲಯದ ಆಶ್ರಯದಲ್ಲಿ ಬಂಟೆರ್ನ ಗೊಬ್ಬುಲು ಎರಡನೇ ವರ್ಷದ ಬಂಟರ ಕ್ರೀಡೋತ್ಸವ ಭಾನುವಾರ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಪೆರಾರ ಮುಂಡಬೆಟ್ಟು ಗುತ್ತು ಗಂಗಾಧರ ರೈ ಅವರು ಕ್ರೀಡೋತ್ಸವ ಉದ್ಘಾಟಿಸಲಿದ್ಧಾರೆ. ಸಚಿವ ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲ್, ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಶ್ರೀ ದೇವೀ ಸಮೂಹ ಸಂಸ್ಥೆಗಳ ಅಧ್ಯಕ್ಷ ಸದಾನಂದ ಶೆಟ್ಟಿ, ಬಜಪೆ ವಲಯ ಬಂಟರ ಸಂಘದ ಅರ್ಧಯಕ್ಷ ವಿಜಯನಾಥ ವಿಠಲ ಶೆಟ್ಟಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಎಂಟು ಪ್ರತ್ಯೇಕ ವಿಭಾಗಗಳಲ್ಲಿ ನಾನಾ ಸ್ಪರ್ಧೆ ಗಳು ನಡೆಯಲಿದ್ಧು ಬಜಪೆ ವಲಯದ 15 ಗ್ರಾಮಗಳ ಬಂಟ ಸಮುದಾಯದ ಮಕ್ಕಳು, ಮಹಿಳೆಯರು, ಪುರುಷರು, ಹಿರಿಯರೂ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಹುದು. ಹೆಚ್ಚು ಅಂಕಗಳಿಸುವ ಗ್ರಾಮಕ್ಕೆ ಸಮಗ್ರ ಪ್ರಶಸ್ತಿ ಇದೆ. ಪಾಲ್ಗೊಳ್ಳುವ ಬಂಟರಿಗೆ ವಸ್ತ್ರ ಸಂಹಿತೆ ಕಡ್ಡಾಯ ಪುರುಷರು ಬಿಳಿ ಲುಂಗಿ, ಶರ್ಟ್ ಹಾಗೂ ಮುಂಡಾಸು, ಮಹಿಳೆಯರು ಸೀರೆ ಅಥವಾ ಚೂಡಿದಾರ್ ಧರಿಸಬೇಕು. ಮಧ್ಯಾಹ್ನ 2 ರಿಂದ *ರೀಲೆ ರಿವಾಜ್* ಒಂದು ಸಂವಾದ ನಡೆಯಲಿದ್ಧು ಜಾನಪದ ಚಿಂತಕ ಡಾ|ವೈ.ಎನ್.ಶೆಟ್ಟಿ, ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಕೇಂದ್ರ ಎಂಜಿಎಂ ಕಾಲೇಜು ಉಡುಪಿ ಇಲ್ಲಿನ ಸಂಶೋಧಕ ಪ್ರೋ ಸುರೇಶ್ ಶೆಟ್ಟಿ ಅವರುಗಳು ಪಾಲ್ಗೊಳ್ಳಲಿದ್ಧಾರೆ. ಸಂಜೆ 6 ರಿಂದ ಬಜಪೆ ವಲಯ ಬಂಟರ ಸಂಘದ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಸಂಜೆ 7 ರಿಂದ ಬಲೆ ತೆಲಿಪಾಲೆ ಖ್ಯಾತಿಯ ದೀಪಕ್ ರೈ ಮತ್ತು ತಂಡ ಹಾಗೂ ಮಂಜು ರೈ ಮತ್ತು ತಂಡದವರಿಂದ ತುಳು ಹಾಸ್ಯ ಕಾರ್ಯಕ್ರಮವಿದೆ ಎಂದು ಬಂಟರ ಸಂಘದ ಪ್ರಕಟಣೆ ತಿಳಿಸಿದೆ

By suddi9

Leave a Reply

Your email address will not be published. Required fields are marked *