ಬಂಟ್ವಾಳ:ತಾಲ್ಲೂಕಿನ ಸಜಿಪಮೂಡ ಗ್ರಾಮದ ಸುಭಾಶ್ನಗರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಆಕರ್ಷಕ ಗುರುಮಂದಿರಕ್ಕೆ ರಾಜ್ಯಸಭಾ ಸದಸ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಅವರು ಶುಕ್ರವಾರ ಭೇಟಿ ನಿಡಿದರು.
ಇದೇ ವೇಳೆ ಅವರು ಮಾತನಾಡಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ ನಿರ್ಮಿಸಲು ಗರಿಷ್ಟ ಮೊತ್ತದ ಅನುದಾನ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.
ಸಮಿತಿ ಅಧ್ಯಕ್ಷ ಕೆ. ಸಂಜೀವ ಪೂಜಾರಿ, ಲೆಕ್ಕ ಪರಿಶೋಧಕ ರಮೇಶ್ ಅನ್ನಪ್ಪಾಡಿ, ಕಾರ್ಯದರ್ಶಿ ಲೋಕೇಶ್ ಪೂಜಾರಿ, ಭಜನಾ ಸಮಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ, ಸದಸ್ಯರಾದ ವಿಶ್ವನಾಥ ಬೆಳ್ಚಡ, ರುಕ್ಮಯ ಪೂಜಾರಿ, ಜಯಶಂಕರ್, ಅಶೋಕ್ ಪೂಜಾರಿ, ನವೀನ್ ಅಂಚನ್, ಅವಿನಾಶ್ ಪೆರ್ವ, ನಿತಿನ್ ದೇರಾಜೆ, ರಾಜೇಶ್ ಕೋಟ್ಯಾನ್ ಶಾಂತಿನಗರ, ಪುರುಷೋತ್ತಮ ಪೂಜಾರಿ, ರವಿಚಂದ್ರ ಸುಭಾಶ್ನಗರ ಮತ್ತಿತರರು ಉಪಸ್ಥಿತರಿದ್ದರು. ಫಾರೂಕ್ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *