ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಮಾತನಾಡಿದರು.
ಮಸೀದಿ ಅಧ್ಯಕ್ಷ ಹಾಜಿ ಜಿ. ಅಬೂಬಕ್ಕರ್ ಗೋಳ್ತಮಜಲು, ಮುದರ್ರಿಸ್ ಕೆ.ಎಸ್. ಹೈದರ್ ದಾರಿಮಿ, ಕೆ.ಎಸ್. ಇಸ್ಮಾಯಿಲ್, ಯೂಸುಫ್ ಅಮರ್, ಶಂಸುಲ್ ಉಲಮಾ, ಜಿ. ಯೂಸುಫ್, ಖತೀಬರಾದ ಇಸ್ಮಾಯಿಲ್ ಫೈಝಿ, ಹೈದರ್ ದಾರಿಮಿ, ಕೆ.ಎಸ್. ಫಾರೂಕ್ ಮತ್ತಿತರರು ಇದ್ದರು.