ಆಳ್ವಾಸ್ ವಿರಾಸತ್ ಸಮಾರೋಪದಲ್ಲಿ ಡಾ.ಎಂ ಮೋಹನ ಆಳ್ವ
ಮೂಡುಬಿದರೆ: ಬದುಕಿನ ಪ್ರಮುಖ ಅಂಶಗಳಾಗಿರುವ ಧಾರ್ಮಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳು ಇಂದಿನ ದಿನಗಳಲ್ಲಿ ಕುಸಿತ ಕಾಣುತ್ತಿವೆ. ಈ ಬಗ್ಗೆ ನಮ್ಮ ಯುವಜನತೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಈ ಕುರಿತು ಕಾಳಜಿ ವಹಿಸಬೇಕು. ಅತ್ಯಂತ ಎಚ್ಚರಿಂದ ಮತ್ತು ಸಭ್ಯತೆಯಿಂದ ಸಾಂಸ್ಕøತಿಕ ಕ್ಷೇತ್ರವನ್ನು ಆಸ್ವಾದಿಸಬೇಕಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.
ನಾಲು ದಿನಗಳ ಕಾಲ ನಡೆದ ಆಳ್ವಾಸ್ ವಿರಾಸತ್ನ ಸಮಾರೋಪದಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಧಾರ್ಮಿಕ ಕ್ಷೇತ್ರ ಪೊಳ್ಳು ಸ್ವಾಮೀಜಿಗಳ ಹಾವಳಿಯಿಂದ ಹಾಳಾಗಿ ಯುವಜನತೆಯನ್ನು ದಾರಿ ತಪ್ಪಿಸಲಾಗುತ್ತಿದೆ. ಜಾನಪದ ಮತ್ತು ಶಾಸ್ತ್ರೀಯ ಕ್ಷೇತ್ರದಲ್ಲಿ ಕೂಡ ನುಸುಳಿಕೊಂಡಿರುವ ನಕಲಿ ವಿಚಾರಗಳು ಯುವಜನತೆಯ ದಿಕ್ಕು ತಪ್ಪಿಸುವವಲ್ಲಿ ಕಾರಣವಾಗುತ್ತಿದೆ. ಯುವಜನತೆ ಮತ್ತು ವಿದ್ಯಾರ್ಥಿಗಳು ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅತ್ಯಂತ ಎಚ್ಚರದ ಹೆಜ್ಜೆ ಇಡಬೇಕು. ಎಂದ ಅವರು ಆಳ್ವಾಸ್ ವಿರಾಸತ್ ಸಾಂಸ್ಕøತಿಕ ಉತ್ಸವದ ಮೂಲಕ ನಾಡಿಗೆ ಅತ್ಯುತ್ತಮವಾದ ಸಂದೇಶ ರವಾನಿಸಬೇಕಾಗಿದೆ ಎಂದರು.