ಬಂಟ್ವಾಳ: ನೂತನ ಡ್ಯಾಂನಲ್ಲಿ ನೀರು ಸಂಗ್ರಹವಾಗುತ್ತದೆ ಎಂದು ಮಂಗಳೂರಿನ ಜನತೆ ಕಾದಿದ್ದೆ ಬಂತು. ಆದರೆ ಈ ಬಾರಿಯೂ ಅದು ಕೈಗೂಡಿಲ್ಲ. ಇದೀಗ ಈ ಹಿಂದಿನಂತೆ ಹಳೆಯ ಕಿಂಡಿ ಅಣೆಕಟ್ಟಿಗೆ ಗೇಟ್ ಅಳವಡಿಸುವ ಕಾರ್ಯ ನಡೆಯುತ್ತಿದೆ.

ಕಳೆದ ಕೆಲ ದಿನಗಳಿಂದ ತುಂಬೆಯ ಕಿಂಡಿ ಅಣೆಕಟ್ಟಿಗೆ ಹಲಗೆಗಳನ್ನು ಜೋಡಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಮಳೆ ಕಡಿಮೆಯಾಗುತ್ತಿದ್ದಂತೆಯೇ ಕಾರ್ಮಿಕರು ಡ್ಯಾಂನ ಕಿಂಡಿಗಳಿಗೆ ಹಲಗೆ ಜೋಡಿಸುವ ಕಾರ್ಯದಲ್ಲಿ ತೋಡಗಿಸಿಕೊಂಡಿದ್ದಾರೆ. ಈಗಿನಿಂದಲೇ ನೀರು ಸಂಗ್ರಹಣೆ ನಡೆಯದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯು ತಲೆದೋರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಗೇಟ್ ಅಳವಡಿಸಿ ಡ್ಯಾಂನಲ್ಲಿ ನೀರು ಸಂಗ್ರಹಿಸುವ ಕಾರ್ಯ ನಡೆಯುತ್ತದೆ ಆದರೆ ಈ ಬಾರಿ ಡಿಸೆಂಬರ್‍ವರೆಗೂ ಮಳೆ ಸುರಿದ ಪರಿಣಾಮ ಈಗ ಹಲಗೆ ಹಾಕಲಾಗುತ್ತಿದೆ. ಹಲಗೆಗಳಿಗೆ ಬಣ್ಣ ಬಳಿಯುವ ಕಾರ್ಯ ಒಂದೆಡೆ ನಡೆಯಿತ್ತಿದ್ದರೆ ಸರಪಳಿಯ ಮೂಲಕ ಒಂದೊಂದೆ ಹಲಗೆಯನ್ನು ಕಿಂಡಿಗಳಿಗೆ ಜೋಡಿಸಲಾಗುತ್ತಿದೆ
