ಬಂಟ್ವಾಳ: ವಿಶ್ವ ಧರ್ಮ ಪ್ರತಿಪಾದಕರಾಗಿದ್ದ ಶ್ರೀ ಮಧ್ವಾಚಾರ್ಯರ ಮಹಾತ್ಮೆಯ ನೆನಪಿಗಾಗಿ ಮಧ್ವಕಟ್ಟೆಯನ್ನು ಅಭಿವೃದ್ಧಿಗೊಳಿಸಿ ಐತಿಹಾಸಿಕ ಸ್ಮಾರಕ ನಿರ್ಮಿಸಲಾಗಿದೆ. ಐದನೆಯ ಪರ್ಯಾಯ ಸಂದರ್ಭದಲ್ಲಿ ಶ್ರೀ ಮಧ್ವಾಚಾರ್ಯರ ಸೇವೆ ಸಲ್ಲಿಸುವ ಸಂಕಲ್ಪ ನೆರವೇರಿದೆ. ಇದರಿಂದ ಗ್ರಾಮಾಭಿವೃದ್ಧಿ ಹಾಗೂ ರಾಷ್ಟ್ರ ಸುಭಿಕ್ಷೆ ಉಂಟಾಗಲಿ ಎಂದು ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ನುಡಿದರು.
ಅವರು ಶನಿವಾರ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಮಧ್ವದಲ್ಲಿರುವ ಐತಿಹಾಸಿಕ ಮಧ್ವಕಟ್ಟೆಯಲ್ಲಿ ಶ್ರೀ ಪೇಜಾವರ ಅಧೋಕ್ಷಜ ಟ್ರಸ್ಟ್ ವತಿಯಿಂದ 1 ಕೋ.ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಮಧ್ವಮಂಟಪದ ಪ್ರವೇಶೋತ್ಸವ ನೆರವೇರಿಸಿ, ಶ್ರೀ ಮಧ್ವಾಚಾರ್ಯರ ಮೂರ್ತಿಯನ್ನು ಪ್ರತಿಷ್ಟಾಪಿಸಿ
ಆಶೀರ್ವಚನ ನೀಡಿದರು.

1601pktG1

DSC_0035
ಪೇಜಾವರ ಶ್ರೀಗಳ ಪಟ್ಟ ಶಿಷ್ಯ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಸಚಿವ ಬಿ.ರಮಾನಾಥ ರೈ, ಹಿರಿಯ ವಿದ್ವಾಂಸ ಕೆ.ಎಲ್.ಆಚಾರ್ಯ, ಪೇಜಾವರ ಶ್ರೀಗಳ ಆಪ್ತ ರಾಘವೇಂದ್ರ ಭಟ್, ಪ್ರಮುಖರಾದ ನಾರಾಯಣ ಕೆರ್ಮುಣ್ಣಾಯ, ಪಿ.ಜಿನರಾಜ ಆರಿಗ, ತಾ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್, ವಿನಯ ನಾಯಕ್,ಗ್ರಾ.ಪಂ.ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಉಪಾಧ್ಯಕ್ಷೆ ಭವಾನಿ,ಕೆ.ಮಾಯಿಲಪ್ಪ ಸಾಲಿಯಾನ್,ಕೆ.ಲಕ್ಷ್ಮಿ ನಾರಾಯಣ ಉಡುಪ,ಎಂ.ತುಂಗಪ್ಪ ಬಂಗೇರ, ಪ್ರಕಾಶ್ ಶೆಟ್ಟಿ,ಸತೀಶ್ ಶೆಟ್ಟಿ ಮಧ್ವ,ಚಂದ್ರಶೇಖರ ಕರ್ಣ, ಆನಂದ, ರಾಮಣ್ಣ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಸತೀಶ್ ಶೆಟ್ಟಿ, ಕೆ.ಧರ್ಮಪಾಲ ಪೂಜಾರಿ, ಪ್ರಭಾಕರ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *