ಬಂಟ್ವಾಳ: ಬೆಂಗಳೂರು ಪ್ರತಿಷಿತ ಸಂಸ್ಥೆ ವಂಡರ್ಲಾ ಹಾಲಿಡೇಸ್ ಲಿಮಿಟೆಡ್ ಇದರ ವತಿಯಿಂದ ನೀಡಲಾಗುವ 2015-16ನೇ ಸಾಲಿನ ಪರಿಸರ ಸ್ನೇಹಿ ಪ್ರಶಸ್ತಿಯನ್ನು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಪಡೆದುಕೊಂಡಿದೆ. ವಿದ್ಯಾಕೇಂದ್ರದ ಪರಿಸರಕ್ಕೆ ಭೇಟಿ ನೀಡಿದ ಅಲ್ಲಿನ ತಂಡ ವಿದ್ಯಾಸಂಸ್ಥೆಯ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ಜೊತೆ ಜೊತೆಗೆ ಪ್ರಾಕೃತಿಕವಾಗಿಯೂ ಉತ್ತಮವಾದ ವಾತಾವರಣ ಇಲ್ಲಿರುವುದನ್ನು ಗಮನಿಸಿ ಈ ಪ್ರಶಸ್ತಿ ನೀಡಿದೆ.
ಶಿಶುಮಂದಿರ, ಪ್ರಾಥಮಿಕ ಹಾಗೂ ಫ್ರೌಢಶಾಲಾ ವಿಭಾಗಗಳಲ್ಲಿರುವ ಶಾಲಾ ಕೈತೋಟ, ಉದ್ಯಾನವನ, ಹಾಗೂ ಪಶು-ಪಕ್ಷಿಗಳ ಪಾಲನೆ ಪೋಷಣೆಗೆ ಅದರ ಸ್ವಚ್ಚತೆ, ರಕ್ಷಣೆ ಇತ್ಯಾದಿಗಳನ್ನು ಸೂಕ್ಷವಾಗಿ ತಂಡ ಪರಿಶೀಲಿಸಿದೆ. ನೀರಿನ ಸಮರ್ಪಕ ಬಳಕೆ ಹಾಗೂ ವಾತಾವರಣದಲ್ಲಿನ ಸ್ವಚ್ಚತೆಯನ್ನು ಗಮನಿಸಿ ಈ ಪ್ರಶಸ್ತಿಗೆ ಆಯ್ಕೆಮಾಡಿದೆ. ದಿ.5 ರಂದು ಬೆಂಗಳೂರಿನ ವಂಡರ್ಲಾದ ಆವರಣದಲ್ಲಿ ಆಯೋಜನೆಯಾಗಿರುವ ಈ ಬೃಹತ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಈ ಪ್ರಶಸ್ತಿಗೆ ಭಾಜನರಾದ ವಿದ್ಯಾಸಂಸ್ಥೆಯನ್ನು ಶ್ರೀರಾಮ ಶಾಲಾಭಿವೃದ್ಧಿ ಸಮಿತಿಗಳು, ಸ್ಥಳೀಯ ಯುವಕ ಮಂಡಲಗಳು, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಅಪಾರ ಹಿರಿಯ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.