ಮೂಡುಬಿದಿರೆ: ಶಿರ್ತಾಡಿ ಬಳಿ ಪರಿಚಯಸ್ಥ ಅಪ್ರಾಪ್ತ ಬಾಲಕಿಯೋರ್ವಳನ್ನು ಅತ್ಯಾಚಾರಗೈದ ಆರೋಪದ ಮೇರೆಗೆ ಸಕಲೇಶಪುರ ಮೂಲದ ವಿ.ಕೆ. ಬಾಬು ಸಾಲಿಯಾನ್ (55)ನನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಆರೋಪಿಗೆ 15ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಯು ಬಾಲಕಿಯ ಕುಟುಂಬದವರಿಗೆ ಪರಿಚಯ ಇರುವ ವ್ಯಕ್ತಿಯಾಗಿದ್ದು ಆಗಾಗ ಮನೆಗೆ ಬಂದು ಹೋಗುತ್ತಿದ್ದ. ನಾಲ್ಕು ತಿಂಗಳ ಹಿಂದೆ ಬಾಲಕಿಯು ಮನೆಯಲ್ಲಿ ಒಂಟಿಯಾಗಿ ಇರುವ ಸಂದರ್ಭ ಸಾಧಿಸಿಕೊಂಡ ಬಾಬು ಸಾಲಿಯಾನ್ ಆಕೆಯನ್ನು ಮನೆಯಲ್ಲೇ ಅತ್ಯಾಚಾರ ಮಾಡಿದ ಎಂದು ಮನೆಯವರು ನೀಡಿದ ದೂರಿನನ್ವಯ ಇಂದು ಆರೋಪಿಯ ಮೇಲೆ ಫೋಕ್ಸೋ ಕಾಯಿದೆಯನ್ವಯ ಕ್ರಮ ಜರಗಿಸಲಾಗಿದೆ ಎಂದು ತಿಳಿದುಬಂದಿದೆ.