ಬಂಟ್ವಾಳ: ಶಾಲೆಯು ಸಂಸೃತಿ ಉಳಿಸುವ ಸರಸ್ವತಿ ಮಂದಿರವಾಗಿದ್ದು, ಲೌಕಿಕ ವಿದ್ಯೆ ಜೊತೆಗೆ ಮಕ್ಕಳಿಗೆ ಆಧ್ಯಾತ್ಮಿಕ ಶಿಕ್ಷಣವೂ ನೀಡಿದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದು ಉಡುಪಿ ಹಂಗಾರಕಟ್ಟೆ ಬಾಳೆಕುದ್ರು ಮಠದ ನೃಸಿಂಹಾಶ್ರಮ ಮಹಾಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ‘ಸಾಮೂಹಿಕ ಸರಸ್ವತಿ ಪೂಜಾ’ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ರಾಜಾರಾಮ ಹೊಳೆಹೊನ್ನೂರು ಮಾತನಾಡಿ, ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಭಕ್ತಿಯಿಂದ ಜ್ಞಾನ ಮತ್ತು ಉತ್ತಮ ಗುಣಗಳನ್ನು ಬೆಳೆಸಿಕೊಂಡಾಗ ಜೀವನದಲ್ಲಿ ಯಶಸ್ವು ಲಭಿಸುತ್ತದೆ ಎಂದರು.
ಶಾಲಾ ಸಂಚಾಲಕ ಡಾ.ಕೆ.ಪ್ರಭಾಕರ ಭಟ್, ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಟ್ರಸ್ಟಿ ಡಾ.ಕಮಲ ಪ್ರಭಾಕರ ಭಟ್, ಕಾರ್ಯನಿರ್ವಹಣಾಧಿಕಾರಿ ವಸಂತ ಮಾಧವ, ಪ್ರಾಚಾರ್ಯ ವಸಂತ ಬಲ್ಲಾಳ, ಮುಖ್ಯಶಿಕ್ಷಕ ರಮೇಶ ಎನ್, ರವಿರಾಜ ಕಣಂತೂರು, ರಘುರಾಜ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು. ಪ್ರಾಚಾರ್ಯ ಕೃಷ್ಣಪ್ರಸಾದ ಸ್ವಾಗತಿಸಿ, ಉಪನ್ಯಾಸಕಿ ಅಕ್ಷತಾ ಮಾತಾಜಿ ವಂದಿಸಿದರು. ಇದೇ ವೇಳೆ ಕಶೆಕೋಡಿ ಸೂರ್ಯನಾರಾಯಣ ಭಟ್ ಪೌರೋಹಿತ್ಯದಲ್ಲಿ ಸಾಮೂಹಿಕ ಸರಸ್ವತಿ ಪೂಜೆ ನಡೆಯಿತು. ಇಲ್ಲಿನ ಮೂರು ಸಾವಿರ ಮಂದಿ ವಿದ್ಯಾರ್ಥಿಗಳು ಸರಸ್ವತಿ ಮಾತೆಗೆ ಸ್ವತಃ ಪುಪ್ಪಾರ್ಚನೆ ಸಲ್ಲಿಸಿ ಮಂತ್ರ ಪಠಿಸಿದರು.