ಬಿಲ್ಲವ ಯುವ ಜನತೆಯನ್ನು   ಪ್ರೋತ್ಸಾಹಿಸೋಣ : ಜಯ ಸುವರ್ಣ
ಮುಂಬಯಿ: ಯಾವೊತ್ತೂ 3 ಜನರ ನಿರ್ಧಾರ ಪರಿಣಾಮಕಾರಿ ಆಗುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆಯಲ್ಲಿ ಬಿಲ್ಲವರು ಇದ್ದು, ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸೇವೆಯೊಂದಿಗೆ ಮುನ್ನಡೆದು ಸಮಾಜದ ಋಣ ಸಂದಾಯ ಮಾಡಬೇಕಾಗಿದೆ. ನಾಲ್ಕು ಸಂಘಗಳ ಸಂಗಮಗಳಿಂದ ಬಿಲ್ಲವರ ಅಸೋಸಿಯೇಶನ್ ರೂಪುಗೊಂಡಿದ್ದು ಅನಕ್ಷರಸ್ಥರಾಗಿದ್ದರೂ ಬುದ್ಧಿವಂತ ಹಿರಿಯರು ಈ ಸಂಘಟನೆಗೆ ಶ್ರಮಿಸಿರುವರು. ನಾವು ಮಾಡಿದ ಕೆಲಸಕ್ಕೆ ಸಮಾಜವು ಶಹಬ್ಬಾಸ್ ಎಂದಗಲೇ ನಮ್ಮ ಜೀವನ ಸಾರ್ಥಕ ಆಗುವುದು. ನಮ್ಮ ಜೀವನ ಬೇರೆಯವರಿಗಾಗಿ ಮುಡುಪಾಗಿಸಿ ನಾವು ಜೀವಿಸಬೇಕು. ನಮ್ಮ ಯುವ ಜನತೆ ಸಮಾಜಘಾತುಕ ಹಾದಿಯಲ್ಲಿ ಹೋಗದಂತೆನಾವು ಅವರನ್ನು ಬೆಳೆಸಬೇಕು. ಬ್ರಹ್ಮಶ್ರೀ ನಾರಾಯಣ ಗುರು ಅವರು ರಕ್ತಪಾತವಿಲ್ಲದೆ ಸಮಾಜ ಒಗ್ಗೂಡಿಸಿದಂತೆ ನಾವೂ ಅವರ ತತ್ವದಿಂದ ಸಮಾಜವನ್ನು ಬಲಪಡಿಸಬೇಕು ಎಂದು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಮೂಲ್ಕಿ ಅಧ್ಯಕ್ಷಮತ್ತು ಬಿಲ್ಲವ ಕ್ರೀಡಾ ಸಮಿತಿ ಗೌರವಾಧ್ಯಕ್ಷ ಜಯ ಸಿ. ಸುವರ್ಣ ಕರೆಯಿತ್ತರು. ವಿಶ್ವದಾದ್ಯಂತ ಸೇವಾನಿರತ ಬಿಲ್ಲವ ಸಮೂದಾಯದ ವಿವಿಧ ಸಂಘ ಸಂಸ್ಥೆಗಳ ಸಾಂಘಿಕತ್ವದಲ್ಲಿಮೂಲ್ಕಿಯ ವಿಜಯಾ ಕಾಲೇಜು ಕ್ರೀಡಾಂಗಣದಲ್ಲಿ ಬಿಲ್ಲವ ಕ್ರೀಡಾ ಸಮಿತಿ ಆಯೋಜಿಸಿರುವ ಎರಡು ದಿನಗಳ ಬಿಲ್ಲವರ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟ ಸಮಾರಂಭದ ಅಧ್ಯಕ್ಷತೆ ವಹಿಸಿ ಜಯ ಸುವರ್ಣ ಮಾತನಾಡಿದರು.

2802mlr18

BillawaCricket Trophy Samaropa-1

BillawaCricket Trophy Samaropa-2

BillawaCricket Trophy Samaropa-3

BillawaCricket Trophy Samaropa-4

BillawaCricket Trophy Samaropa-5

BillawaCricket Trophy Samaropa-6

BillawaCricket Trophy Samaropa-7

BillawaCricket Trophy Samaropa-8

BillawaCricket Trophy Samaropa-18

BillawaCricket Trophy Samaropa-19

BillawaCricket Trophy Samaropa-23

BillawaCricket Trophy Samaropa-25

BillawaCricket Trophy Samaropa-27

BillawaCricket Trophy Samaropa-28

BillawaCricket Trophy Samaropa-29

BillawaCricket Trophy Samaropa-30

BillawaCricket Trophy Samaropa-32

BillawaCricket Trophy Samaropa-33

BillawaCricket Trophy Samaropa-35

BillawaCricket Trophy Samaropa-36

BillawaCricket Trophy Samaropa-A2

BillawaCricket Trophy Samaropa-A3

BillawaCricket Trophy Samaropa-A4

BillawaCricket Trophy Samaropa-A5

BillawaCricket Trophy Samaropa-C1

BillawaCricket Trophy Samaropa-Runner

BillawaCricket Trophy Samaropa-Winnerಬಿಲ್ಲವ ಅಸೋಸಿಯೇಶನ್ ದೆಹಲಿ ಅಧ್ಯಕ್ಷಜಯರಾಮ್ ಬನಾನ್ ವಿಜೇತ ತಂಡಗಳಿಗೆ ಟ್ರೋಫಿ, ಪಾರಿತೋಷಕಗಳನ್ನು ಪ್ರದಾನಿಸಿ ಅಭಿನಂದಿಸಿದರು.ಅಖಿಲ ಭಾರತ ಬಿಲ್ಲವರಯೂನಿಯಾನ್‍ಅಧ್ಯಕ್ಷ ನವೀನ್‍ಚಂದ್ರ ಡಿ.ಸುವರ್ಣ, ಬಿಲ್ಲವ ಜಾಗೃತಿ ಬಳಗ ಮುಂಬಯಿ ಸ್ಥಾಪಕಾಧ್ಯಕ್ಷ ಸೂರು ಸಿ.ಕರ್ಕೇರ, ಅಧ್ಯಕ್ಷ ಎನ್.ಟಿ ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಬಿಲ್ಲವಾಸ್ ದುಬಾಯಿ ಅಧ್ಯಕ್ಷ ಸತೀಶ್ ಪೂಜಾರಿ, ಗುರು ಸೇವಾ ಸಮಿತಿ ಬಹರೆನ್ ಬಿಲ್ಲವಸ್‍ನ ಅಧ್ಯಕ್ಷ ರಾಜ್ ಕುಮಾರ್, ಒಮನ್ ಬಿಲ್ಲವಸ್ ಮಸ್ಕತ್ ಅಧ್ಯಕ್ಷ ಎಸ್.ಕೆ.ಪೂಜಾರಿ, ಬಿಲ್ಲವ ಸಂಘ ಕುವೈೀಟ್ ಇದರ ರಘು ಪೂಜಾರಿ, ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ದಯಾನಂದ ಬೋಂಟ್ರ, ಬಿಲ್ಲವರ ಅಸೋಸಿಯೇಶನ್ ಬೆಂಗಳೂರು ಅಧ್ಯಕ್ಷ ಎಂ.ವೇದಕುಮಾರ್, ಭಾರತ್ ಬ್ಯಾಂಕ್‍ನಉಪ ಮಹಾ ಪ್ರಂಬಧಕಮೋಹನ್‍ದಾಸ್ ಹೆಜ್ಮಾಡಿ, ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷ ಸಂತೋಷ್ ಕುಮಾರ್, ಶ್ರೀ ನಾರಾಯಣ ಗುರು ಯುವ ವೇದಿಕೆ ಮಂಗಳೂರು ಅಧ್ಯಕ್ಷ ಲೋಹಿತ್ ಕುಮಾರ್, ಬಿಲ್ಲವರ ಪರಿಷತ್ ಉಡುಪಿ ಇದರ ದೀಪಕ್ ಎರ್ಮಾಳ್, ಅಖಿಲ ಭಾರತ ಬಿಲ್ಲವ ಏಕೀಕರಣ ಸಮಿತಿ ಮಂಗಳೂರು ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಎಲ್.ವಿ ಅವಿೂನ್ ಮುಂಬಯಿ ವೇದಿಕೆಯಲ್ಲಿ ಆಸೀನರಾಗಿದ್ದರು. ಇದೇ ಸಂದರ್ಭದಲ್ಲಿ ಜಯ ಸಿ. ಸುವರ್ಣ, ಸೂರು ಸಿ.ಕರ್ಕೇರ, ನವೀನ್‍ಚಂದ್ರ ಡಿ.ಸುವರ್ಣ ಇವರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. 16 ತಂಡಗಳ ಕ್ರಿಕೆಟ್ ಸ್ಪರ್ಧೆ ಬಿಲ್ಲವ ಸಮಾಜದ ಇತಿಹಾಸದಲ್ಲಿ ಪ್ರಪ್ರಥಮ ಪಂದ್ಯಾಟ ಎಂದೆಣಿಸಲು ಅಭಿಮಾನವೆಣಿಸುತ್ತದೆ. ಇಲ್ಲಿ ಸ್ಪರ್ಧೆಕ್ಕಿಂತ ಸಾಮರಸ್ಯ ಅನೋನ್ಯತೆ, ಸಹೋದರತ್ವ ಮುಖ್ಯವಾಗಿದೆ. ಇಂತಹ ಕ್ರೀಡೆಯಿಂದ ಬಾಂಧವ್ಯ ಬಲಗೊಳ್ಳಬೇಕು. ಬಿಲ್ಲವರು ಅವಿಭಜಿತ ದಕ್ಷಿಣ ಕನ್ನಡದಲ್ಲಿ ಬಹು ಸಂಖ್ಯಾತರು. 1977ರ ಮೂಲ್ಕಿಯಲ್ಲಿನ ಬಿಲ್ಲವರ ಸಂಘಟಿತ್ವದಿಂದ ರಾಜಕೀಯ ನಾಯಕರನೇಕರಲ್ಲಿ ಸಂಸದ, ಶಾಸಕ, ಸಚಿವರಾಗಿ ಆಯ್ಕೆಯಾಗುವಲ್ಲಿ ಸಹಾಯಕವಾಗಿದೆ. ಬಿಲ್ಲವರು ಭಾವನಾತ್ಮಕವಾಗಿ ಸಂಘಟಿತರಾಗಿ ಗುರುಮಂದಿರ, ದೇವಸ್ಥಾನ ವೈಭವೀಕರಣ ಬದಲು ಬಿಲ್ಲವ ಆಸ್ಪತ್ರೆ, ಹಾಸ್ಟೆಲ್‍ಗಳ ನಿರ್ಮಾಣ ಗೊಳಿಸೋಣ. ಮಹಿಳಾ ಸಬಲೀಕರಣಕ್ಕೆ ಒತ್ತುನೀಡುತ್ತಾ ಸಮಗ್ರ ಬಿಲ್ಲವರ ಸದಾ  ಪ್ರೋತ್ಸಾಹಕ್ಕೆ ಸ್ಪಂದಿಸೋಣ ಎಂದು ನವೀನ್‍ಚಂದ್ರ ಸುವರ್ಣ ತಿಳಿಸಿದರು. ಸೂರು ಕರ್ಕೇರ ಮಾತನಾಡಿ ಇದೊಂದು ಬಿಲ್ಲವರ ಪಾಲಿನ ಅವಿಸ್ಮರಣೀಯ ಒಗ್ಗೂಟ-ಪಂದ್ಯಾಟ. ಈ ಮೂಲಕ ನಮ್ಮಲ್ಲಿನ ಒಮ್ಮತ ಸೃಷ್ಟಿಯಾದಂತಿದೆ. ಬಿಲ್ಲವ ಯುವ ಶಕ್ತಿಯ ಒಗ್ಗೂಡುವಿಕೆಗೆ ಇದು ಸೂಕ್ತವಾದ ಕಾಲಘಟ್ಟವಾಗಿದ್ದು, ಭಿನ್ನಅಭಿಪ್ರಾಯಗಳಿಗೆ ಅಂತ್ಯವಾಡಿ ಸಾಮಾಜಿಕ ಹಿತದೃಷ್ಟಿಯಿಂದ ಸಮಾಜವನ್ನು ಮುನ್ನಡೆಸಲು ಹಿರಿಯರ ಕರ್ತವ್ಯವಾಗಲಿ ಆ ಮೂಲಕ ಬಿಲ್ಲವರ ಶಕ್ತಿ ಜಗತ್ತಿಗೆ ಶ್ರೇಷ್ಠವಾಗಿ ಮೂಡಲಿ ಎಂದರು. ಬಿಲ್ಲವರ ಮಹಾ ಮಂಡಲ ಮೂಲ್ಕಿ ತಂಡವು ಪ್ರಥಮ ಸ್ಥಾನದೊಂದಿಗೆಬಿಲ್ಲವರ ಅಂತರಾಷ್ಟ್ರೀಯ ಕ್ರಿಕೆಟ್ ಟ್ರೋಫಿ 2016 ಮುಡಿಗೇರಿಸಿ 2-ಲಕ್ಷ ನಗದು, ಪ್ರಶಸ್ತಿಪತ್ರ ತನ್ನದಾಗಿಸಿದರೆ. ಬಿಲ್ಲವ ಸಂಘ ಕುವೈೀಟ್ ತಂಡ ದ್ವಿತೀಯ ಸ್ಥಾನದೊಂದಿಗೆ 1-ಲಕ್ಷ ನಗದು, ಪ್ರಶಸ್ತಿಪತ್ರ ತನ್ನದಾಗಿಸಿತು.ಬಿಲ್ಲವಮಹಾಮಂಡಲ ತಂಡದ ಅರ್ಜುನ್ ಪೂಜಾರಿ ಬೆಸ್ಟ್ ಬೌಲರ್ ಮತ್ತುಸರಣಿ ಶ್ರೇಷ (ಆಲ್ ರೌಂಡರ್), ಕುವೈೀಟ್ ತಂಡದ ಶೈಲೇಶ್ ಸುವರ್ಣ ಬೆಸ್ಟ್ ಬ್ಯಾಟ್ಸ್‍ಮೆನ್ ಗೌರವಕ್ಕೆ ಪಾತ್ರರಾಗಿದ್ದು, ಅತಿಥಿಗಳು ಅವರಿಗೆ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕರ್ನಾಟಾ ಕ್ರಿಕೆಟ್ ಅಸೋಸಿಯೇಶನ್‍ನ ಮನೋಹರ್ ಅವಿೂನ್, ಕ್ರಿಕೆಟ್ ಅಕಾಡೆಮಿಯ ಉದಯಕುಮಾರ್ ಕಟಪಾಡಿ, ಕ್ರೀಡಾ ತಾರೆಯರಾದ ಕವಿತಾ ಆರ್.ಪೂಜಾರಿ, ಚೈತ್ರಾ ಬಿ.ಸನೀಲ್, ಅಂತರಾಷ್ಟ್ರೀಯ ಕ್ರೀಡಾಪಟು ನಿತೀನ್ ಮೂಲ್ಕಿಅವರನ್ನೂ ಸನ್ಮಾನಿಸಿ ಗೌರವಿಸಲಾಯಿತು. ವಿಜಯಾ ಕಾಲೇಜು ಮುಖ್ಯಸ್ಥೆ ಶಮಿನಾ ಜಿ.ಆಳ್ವ, ಅಂಪೇರ್‍ಗಳಾದ ರೊನಾಲ್ಡ್ ಪಿಂಟೋ, ಇಬ್ರಾಹಿಂ ಉಡುಪಿ, ಸುಲೇಮಾನ್ ಕಟಪಾಡಿ, ರಾಜೇಶ್ ಮೂಲ್ಕಿ, ಅಸ್ಲಂ ಕಾರ್ನಾಡ್, ಕ್ರೀಡಾ ಸಂಘಟರುಗಳಾದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಶ್ರೀನಿವಾಸ ಆರ್. ಕರ್ಕೇರ, ನಿಲೇಶ್ ಪೂಜಾರಿ ಪಲಿಮಾರು, ಸೇವಾದಳದ ಮುಖ್ಯಸ್ಥ ಗಣೇಶ್ ಕೆ.ಪೂಜಾರಿ ಮತ್ತಿತರರನ್ನು ಗೌರವಿಸಿ ಅಭಿವಂದಿಸಲಾಯಿತು. ಈ ಸಂದರ್ಭದಲ್ಲಿಕ್ರೀಡಾ ಸಮಿತಿ ಸಂಚಾಲಕ ಬಿಪಿನ್ ಪ್ರಸಾದ್, ಸುರೇಂದ್ರ ಎ.ಪೂಜಾರಿ, ಹರೀಶ್ ಜಿ.ಅವಿೂನ್, ಎಲ್.ವಿ ಅವಿೂನ್, ಉಪಸ್ಥಿತರಿದ್ದು, ಶಿವನಾರಾಯಣ ಐತಾಳ್ ಮತ್ತು ಅರವಿಂದ ಮಣಿಪಾಲ ಕಮೇಂಟ್ರಿಯಲ್ಲಿ ಸಹಕರಿಸಿದರು. ವಿನಯ ಕುಮಾರ್ ಪ್ರಾರ್ಥನೆಯನ್ನಾಡಿದರು. ಬಿಲ್ಲವ ಕ್ರೀಡಾ ಸಮಿತಿ ಅಧ್ಯಕ್ಷ ರಾಜಶೇಖರ್ ಆರ್.ಕೋಟ್ಯಾನ್ ಮುದರಂಗಡಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಎಂ.ಚಂದ್ರಶೇಖರ ಸುವರ್ಣ ಪ್ರಾಸ್ತವಿಕ ನುಡಿಗಳನ್ನಾಡಿದರು. ಸಹ ಸಂಚಾಲಕ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರ್ವಾಹಿಸಿದರು. ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕುಬೆವೂರು ಧನ್ಯವದಿಸಿದರು. ಕ್ರೀಡಾ ಧ್ವಜಾವನ್ನಿಳಿಸಿ ಎರಡು ದಿನಗಳ ಪಂದ್ಯಾಟಕ್ಕೆ ವಿರಾಮಿಸಲಾಯಿತು.

By suddi9

Leave a Reply

Your email address will not be published. Required fields are marked *