ಬಂಟ್ವಾಳ: ಇಲ್ಲಿನ ಕೇಲ್ದೋಡಿ ಶ್ರೀ ವೈದ್ಯನಾಥ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಕ್ಷೇತ್ರದ ವಾರ್ಷಿಕ ಜಾತ್ರಾಮಹೋತ್ಸವ ಗುರುವಾರ ರಾತ್ರಿ ವಿಜ್ರಂಭಣೆಯಿಂದ ನಡೆಯಿತು. ಬ್ರಹ್ಮಬೈದರ್ಕಳ ದೈವಗಳ ನೇಮೋತ್ಸವವೂ ಆಕರ್ಷಕವಾಗಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ಜಾತ್ರೋತ್ಸವದಲ್ಲಿ ಭಾಗವಹಿಸಿ ಗಂಧ ಪ್ರಸಾದ ಸ್ವೀಕರಿಸಿದರು.
BTW_MAR4_2B

BTW_MAR4_2Aನೇಮೋತ್ಸವಕ್ಕೆ ಮುಂಚಿತವಾಗಿ ಜಾತ್ರಾ ದಶಮಾನೋತ್ಸವದ ಸವಿನೆನೆಪಿಗಾಗಿ ನೂತನವಾಗಿ ನಿರ್ಮಿಸಿದ ದೇಯಿಬೈದಿತಿ ಅನ್ನಛತ್ರವನ್ನು ಲೋಕಾರ್ಪಣೆಗೊಳಿಸಲಾಯಿತು. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೊಟ್ಯಾನ್ ಹಾಗೂ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಪತಿ ಭಟ್ ಪುಂಚೋಡಿ ನೂತನ ಅನ್ನಛತ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಅಂಚನ್, ಕೇಲ್ದೋಡಿಗುತ್ತು ಕೋಟಿ ಪೂಜಾರಿ, ಪಿಲ್ಕಾಜೆಗುತ್ತು ಕೊರಗಪ್ಪ ಪೂಜಾರಿ, ಸಮಿತಿಯ ಪ್ರಮುಖರಾದ ಕರುಣೇಂದ್ರ ಪೂಜಾರಿ ಕೊಂಬ್ರಬೈಲು, ಕಾರ್ಯದರ್ಶಿ ಆನಂದ ಕೋಟ್ಯಾನ್, ಕೋಶಾಧಿಕಾರಿ ರಾಮಪೂಜಾರಿ ನೂಜಂತ್ತೋಡಿ, ಸದಸ್ಯರಾದ ಗೋಪಾಲ ಪೂಜಾರಿ ಅಮೈ, ಜನಾರ್ದನ ಪೂಜಾರಿ ಕೇಲ್ದೋಡಿ, ಕೋಟಿ ಚೆನ್ನಯ ಪಾತ್ರಿಗಳಾದ ನೋಣು ಮತ್ತು ನೋಣಯ್ಯ ಪೂಜಾರಿ, ಶೇಖರ ಅಂಚನ್ ಪಿಲ್ಕಾಜೆಗುತ್ತು, ಪುರುಷೋತ್ತಮ ಅಂಚನ್ ಪಿಲ್ಕಾಜೆಗುತ್ತು, ರವಿ ಪೂಜಾರಿ ಪಾರೊಟ್ಟು, ಸಂಜೀವ ಪೂಜಾರಿ ಪಿಲಿಂಗಾಲು, ಧರ್ಣಪ್ಪ ಪೂಜಾರಿ ರಾಮನಗರ , ಮೋಹನದಾಸ ನೂಜಂತ್ತೋಡಿ, ಜಗದೀಶ ಪೂಜಾರಿ ಕೇಲ್ದೋಡಿ, ಕೇಶವ ಪೂಜಾರಿ ಆಚಾರಿಪಲ್ಕೆ, ಕೃಷ್ಣಪ್ಪ ಪೂಜಾರಿ, ವಿಶ್ವನಾಥ ಪೂಜಾರಿ, ವಸಂತ ಪೂಜಾರಿ, ಉಮೇಶ್ ಸುವರ್ಣ ತುಂಬೆ ಹಾಜರಿದ್ದರು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರಾ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್, ಪಂಜಿಕಲ್ಲು ಗುತ್ತು ಕೃಷ್ಣರಾಜ ಜೈನ್, ಪೀರ್ದೋಟ್ಟು ಗುತ್ತು ಪ್ರಕಾಶ್ ಕುಮಾರ್ ಜೈನ್ ಕ್ಷೇತ್ರಕ್ಕೆ ಭೇಟಿ ನೀಡಿದರು.

By suddi9

Leave a Reply

Your email address will not be published. Required fields are marked *