ಮಂಗಳೂರು:ವಾಮಂಜೂರಿನ ಸೈಂಟ್‍ರೇಮಂಡ್‍ನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ವಾರಂತ್ಯ ಪತ್ರಿಕೋದ್ಯಮ ಶಿಬಿರವು ಇಂದು ಸಮಾಪನ ಕಂಡಿತು.ಕಾರ್ಯಕ್ರಮದಲ್ಲಿ ಮಾಜಿ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ವಸ್ತುನಿಷ್ಟ ಪತ್ರಿಕೊದ್ಯಮ ಬೆಳೆಸುವ ಗುರುತರ ಹೊಣೆಗಾರಿಕೆ ಯುವಪತ್ರಕರ್ತರಾಗುವವರ ಮೇಲಿದೆ ಎಂದರು.
ವಿಜಯಕರ್ನಾಟಕ ಪತ್ರಿಕೆಯ ಮಂಗಳೂರು ವಿಭಾಗದ ಸ್ಥಾನೀಯ ಸಂಪಾದಕ ಯು.ಕೆ ಕುಮಾರನಾಥ ಮಾತನಾಡಿ, ಪತ್ರಿಕೋದ್ಯಮ ಕಲೆ ತರಬೇತಿಯಿಂದ ಸಿದ್ದಿಸಿಕೊಳ್ಳುವುದಲ್ಲ. ಅದು ರಕ್ತಗತವಾಗಿ ಬರಬೇಕು. ಇಂದಿನ ಐಪೆನ್ ಯುಗದಲ್ಲಿ ಪ್ರತಿಕ್ಷಣದ ಸುದ್ದಿ ಬಿತ್ತರ ಸ್ಪರ್ಧಾತ್ಮಕವಾಗಿದ್ದು ಬರಹ ಸೃಜಶೀಲವಾಗಿಲ್ಲದ್ದರೆ ಜನ ಒದಲಾರರು. ಪತ್ರಿಕೆ ಸಮಾಜದ ಕನ್ನಡಿಯಾಗಿದ್ದು ಸ್ಥಳೀಯ ವಿಷಯಗಳು ಜನರನ್ನು ಆಪ್ತರನ್ನಾಗಿಸುತ್ತದೆ ಎಂದರು.DSC_8797

DSC_8742

DSC_8744
DSC_8804

DSC_8820
ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ವಿಭಾಗದ ಸ್ಥಾನೀಯ ಸಂಪಾದಕರಾದ ರೋನಾಲ್ಡ್ ಫೆರ್ನಾಂಡಿಸ್ ಮಾತನಾಡಿ ವಿದ್ಯಾರ್ಥಿಗಳು ಹೆಚ್ಚು ಪತ್ರಿಕೆಗಳನ್ನು ಓದುವ ಮೂಲಕ ಬರವಣಿಗೆ ಶೈಲಿ ಉತ್ತಮಪಡಿಸಿಕೊಳ್ಳಬೇಕು.ಪತ್ರಿಕೆಯ ವಸ್ತು ವಿಷಯಗಳನ್ನು ತಿಳಿದುಕೊಳ್ಳುವ ಮೂಲಕ ಪತ್ರಿಕೋದ್ಯಮ ಪ್ರವೇಶಕ್ಕೆ ವೇದಿಕೆ ಸಿದ್ಧ ಪಡಿಸಬೇಕು ಎಂದರು. ಉತ್ತಮ ವರದಿಗಾರಿಕೆ ಹಾಗೂ ಲೇಖನ ರಚನೆಯಲ್ಲಿ ಸೈಂಟ್ ಆಗ್ನೇಷ್ ವಿದ್ಯಾರ್ಥಿಗಳು ಹಾಗೂ ಕಾವೂರು ಕಾಲೇಜು ಪ್ರಶಸ್ತಿ ಪಡೆದುಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಿನ್ಸಿಪಾಲ್ ಡಾ.ಸೆಲಿನ್‍ವಾಸ್ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಡೊಂಬಯ್ಯ ಇಡ್ಕಿದು ವೇದಿಕೆಯಲ್ಲಿದ್ದರು. ಮಹಮ್ಮದ್ ಭಕ್ಷ ವಾರಾಂತ್ಯ ಪತ್ರಿಕೋದ್ಯಮ ಶಿಬಿರದ ಸಮಗ್ರ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ವಾರಾಂತ್ಯ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಉಪನ್ಯಾಸಕಿ ನಮಿತಾ ಆಚಾರ್ಯ ಸ್ವಾಗತಿಸಿದರು. ಉಪಪ್ರಿನ್ಸಿಪಾಲ್ ಸಗಯಾಸೆಲ್ವಿ ವಂದಿಸಿದರು.

By suddi9

Leave a Reply

Your email address will not be published. Required fields are marked *