ಬಂಟ್ವಾಳ: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಸಾರ್ವತ್ರಿಕ ಪ್ರಶ್ನೆಗಳಿಗೆ ಉತ್ತರ ಬಯಸಿ ಸಮಾನ ಮನಸ್ಕ ಹೋರಾಟಗಾರರು `ಅರಣ್ಯ ಸಚಿವರೇ, ಉತ್ತರ ಕೊಡಿ ಅಭಿಯಾನ’ಕ್ಕೆ ಮತ್ತೆ ಚುರುಕು ಮೂಡಿಸಿದ್ದಾರೆ. ಈಗಾಗಲೇ 2 ಸಲವೂ ರದ್ದುಗೊಂಡಿರುವ ಈ ವಿಶಿಷ್ಟ ಕಾರ್ಯಕ್ರಮ ಮಾ. 22ಕ್ಕೆ ಚಾಲನೆ ಗೊಳ್ಳಲಿದೆ.

ನೇತ್ರಾವತಿ ನದಿ ತಿರುವು ಯೋಜನೆಯನ್ನು ಜಿಲ್ಲೆಯ ಜನತೆ ತೀವ್ರವಾಗಿ ವಿರೋಧಿಸಿದ್ದರೂ, ಸರಕಾರ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲು ವಿಫಲವಾಗಿದೆ. ಹಲವಾರು ಸಂಘಟನೆಗಳು ಹಲವಾರು ಪ್ರತಿಭಟನೆ ನಡೆಸಿದ್ದರೂ, ಸರಕಾರ ಸ್ಪಂದನೆ ದೊರೆತಿರಲಿಲ್ಲ. ಸ್ಥಳೀಯ ಶಾಸಕರಾದಿ ಜನಪ್ರತಿನಿಧಿಗಳ ತಮ್ಮ ನಿಲುವನ್ನು ಸ್ಪಷ್ಟ ಪಡಿಸಲು ಈ ಆಂದೋಲನ ರೂಪಿಸಲಾಗಿದೆ ಎಂದು ಬಂಟ್ವಾಳ ತಾಲೂಕು ನ್ಯಾಯಪರ ಸಮಿತಿ ಅಧ್ಯಕ್ಷ ಕೃಷ್ಣ ಅಲ್ಲಿಪಾದೆ ತಿಳಿಸಿದ್ದಾರೆ.
11 ಪ್ರಶ್ನೆಗಳೇನು
ಯೋಜನಾ ಪ್ರದೇಶದಲ್ಲಿ 9.55 ಟಿಎಂಸಿ ಲಭ್ಯವಿದ್ದು, ಪೂರ್ವಕ್ಕೆ 1.25ಟಿಎಂಸಿ ಪೂರ್ವಕ್ಕೆ ಸಾಗಿಸಲು ಲಭ್ಯ ಇರುತ್ತದೆ. ಆದರೆ ಎಲ್ಲಿಂದ 24ಟಿಎಂಸಿ ನೀರು ಪೂರೈಸಲಾಗುತ್ತಿದೆ? 600 ಹೆಕ್ಟೇರ್ ಅರಣ್ಯ ಭೂಮಿ ಮಂಜೂರು ಮಾಡಲಾಗಿದೆಯೇ? ಜಿಲ್ಲೆಯ ಜನಜೀವನದ ಮೇಲೆ ಉಂಟಾಗುವ ಪರಿಣಾಮ ಅಧ್ಯಯನ ಮಾಡಲಾಗಿಯೇ? 370ಎಂಡಬ್ಲ್ಯೂ ವಿದ್ಯುತ್ ಶಕ್ತಿ ಅವಶ್ಯಕತೆ ಇದ್ದು, ಇದರ ಪೂರೈಕೆ ಹೇಗೆ ಮಾಡಲಾಗುತ್ತದೆ? ಆನೆಕಾರಿಡಾಕ್ ಸಂರಕ್ಷಣಾ ಕ್ರಮಗಳೇನು? ಯೋಜನೆಯ ವಿಫಲವಾದರೆ, 91 ಸಾವಿರ ಕೋಟಿ ನಷ್ಟಕ್ಕೆ ಯಾರು ಹೊಣೆ? ಮೀನುಗಾರಿಕೆಯ ಮೇಲಾಗುವ ಪರಿಣಾಮವನ್ನು ಅಧ್ಯಯನ ಮಾಡಲಾಗಿದೆಯೇ? ಎಂಬ 11 ಪ್ರಶ್ನೆಗಳನ್ನು ಅರಣ್ಯ ಸಚಿವರಿಗೆ ನ್ಯಾಯಪರ ಸಮಿತಿ ಸಲ್ಲಿಸಿತ್ತು.
ನಮ್ಮ ನದಿ ನೀರನ್ನು ಬಯಲು ಸೀಮೆಗೆ ಕೊಡುವ ಅಧಿಕಾರ ಕೊಟ್ಟವರು ಯಾರು? ಮತದಾರರ ಋಣ ತೀರಿಸಲಿ. ಶಾಸಕರು, ಸಚಿವರು ಇದ್ದರೂ, ನಮಗೇನು ಪ್ರಯೋಜನ? ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತಾಗಿದೆ ನಮ್ಮ ಜನರ ಪರಿಸ್ಥಿತಿ ಎಂದು ಸಾಮಾಜಿಕ ಮುಖಂಡ ಹಾರೂನ್ ರಶೀದ್ ಅವರು ಪ್ರತಿಕ್ರಿಯಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆಯಿಂದಾಗಿ 2 ಸಲ ಈ ಕಾರ್ಯಕ್ರಮ ರದ್ದುಗೊಳಿಸಲಾಗಿದ್ದು, ಇದೀಗ ಮತ್ತೆ ಚಾಲನೆಗೊಳಿಸಲಾಗಿದೆ. ಸಾರ್ವತ್ರಿಕವಾಗಿ ಗಮನ ಸೆಳೆಯುವ ಈ ಆಂದೋಲನ ಎಲ್ಲೆಡೆಯೂ ನಡೆದು, ಸರಕಾರದ ಗಮನ ಸೆಳೆಯಬೇಕಾಗಿದೆ ಎಂದು ಹೋರಾಟಗಾರ ಪ್ರಭಾಕರ ದೈವಗುಡ್ಡೆ ಅವರು ತಿಳಿಸಿದ್ದಾರೆ.
ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿಯ ಅಧ್ಯಕ್ಷ ಕೃಷ್ಣ ಅಲ್ಲಿಪಾದೆ, ಉಪಾಧ್ಯಕ್ಷರಾದ ರಾಜ ಚೆಂಡ್ತಿಮಾರ್, ಬಿ.ಎಂ.ಪ್ರಭಾಕರ ದೈವಗುಡ್ಡೆ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಸುವರ್ಣ ಕಾಯರ್ಮಾರ್, ಕಾರ್ಯದರ್ಶಿ ಹರೀಶ್ ಪೆರಾಜೆ, ಕೋಶಾಧಿಕಾರಿ ಅಯ್ಯೂಬ್ ಜಿ.ಕೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ರಜಾಕ್ ಗುಂಪಕಲ್ಲು, ನಾರಾಯಣ ನಾಯ್ಕ್ ಮಾವಿನಕಟ್ಟೆ ಸಭೆಯಲ್ಲಿ ಪಾಲ್ಗೊಂಡರು.

 

 

 

 

 

 

By suddi9

Leave a Reply

Your email address will not be published. Required fields are marked *