ಬಂಟ್ವಾಳ: ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬನೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜನಜಾಗೃತಿ ಮೂಡಿಸಿದೆ ಎಂದು ಅರ್ಚಕ ಕಶೆಕೋಡಿ ಸೂರ್ಯ ನಾರಾಯಣ ಭಟ್ ಹೇಳಿದರು.
ತಾಲ್ಲೂಕಿನ ಕಲ್ಲಡ್ಕ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವತಿಯಿಂದ ಮಂಗಳವಾರ ನಡೆದ ಪದಗ್ರಹಣ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.
ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಎ.ರುಕ್ಮಯ್ಯ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರಾವಳಿ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ರೋಟರಿ ಕ್ಲಬ್ ಮಾಕಿ ಅಧ್ಯಕ್ಷ ಪ್ರಕಾಶ್ ಕಾರಂತ, ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಎ.ಸಿ.ಭಂಡಾರಿ ಮತ್ತಿತರರು ಶುಭ ಹಾರೈಸಿದರು.
ವಕೀಲ ಅಶೋಕ್ ಕುಮಾರ್ ಬರಿಮಾರು, ಎಂಜಿನಿಯರ್ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು, ಉದ್ಯಮಿ ಜಗನ್ನಾಥ ಚೌಟ, ಜೀರ್ಣೋದ್ಧಾರ ಸಮಿತಿ ಸದಸ್ಯ ಬಟ್ಯಪ್ಪ ಶೆಟ್ಟಿ, ಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠಲ ನಾಯ್ಕ, ಒಕ್ಕೂಟ ಅಧ್ಯಕ್ಷ ವೆಂಕಟ್ರಾಯ ಪ್ರಭು, ಜನಜಾಗೃತಿ ವಲಯಾಧ್ಯಕ್ಷ ಆನಂದ ಸಾಲಿಯಾನ್, ಪ್ರಮುಖರಾದ ವಿಜಯ, ರೇಖಾ, ರಾಜೇಶ್ವರಿ, ಮೇಲ್ವಿಚಾರಕ ಶಿವಪ್ಪ ಎಂ.ಕೆ., ಪ್ರತಿನಿಧಿ ಮಾಲತಿ, ಲಕ್ಷ್ಮೀ, ರಾಜೇಶ್ ಕೊಟ್ಟಾರಿ ಮತ್ತಿತರರು ಇದ್ದರು.