ಬಂಟ್ವಾಳ: ರಾಮಾಯಣ ಮತ್ತು ಮಹಾಭಾರತದಂತಹ ಮಹಾನ್ ಗ್ರಂಥಗಳು ನಮಗೆ ಸಂಸ್ಕಾರ ಜೊತೆಗೆ ಜೀವನ ಮೌಲ್ಯ ನೀಡುವ ಪವಿತ್ರ ಗ್ರಂಥಗಳಾಗಿದ್ದು, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ನಾವು ಬದುಕಿನಲ್ಲಿ ರಾವಣನಾಗದೆ ರಾಮನಾಗಿ ಸಮಾಜಮುಖಿಯಾಗಿ ಜೀವಿಸಬೇಕು ಎಂದು ರಾಷ್ಟ್ರೀಯ ಸೇವಾ ಸಂಘದ ಕುಟುಂಬ ಪ್ರಭೋದನ್ ಪುಂಡರಿಕಾಕ್ಷ ಯೋಗಾಚಾರ್ಯ ಹೇಳಿದರು.
ತಾಲ್ಲೂಕಿನ ರಾಮಲ್ಕಟ್ಟೆ ರಾಷ್ಟ್ರೀಯ ಹೆದ್ದಾರಿ ಸಮೀಪದ ವಳವೂರು ಗದ್ದೆಯಲ್ಲಿ ‘ಶ್ರೀರಾಮ ನಾಮ ತಾರಕ ಜಪ ಯಜ್ಷ’ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ
ಧರ್ಮ ಸಭೆಯಲ್ಲಿ ಅವರು ‘ಶ್ರೀ ರಾಮ ಪಥದರ್ಶನ’ ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸ ನೀಡಿದರು.
ತುಂಬೆಯ ವಳವೂರು ಗದ್ದೆಯಲ್ಲಿ ಮಾ.27 ರಂದು ನಡೆದ ಶ್ರೀ ರಾಮ ನಾಮ ತಾರಕ ಜಪ ಯಜ್ಞವು ಶ್ರೀ ಕಶೆ ಕೊಡಿ ಸೂರ್ಯ ನಾರಾಯಣ ಭಟ್ ರ ನೇತ್ರತ್ವದಲ್ಲಿ ಬೆಳಿಗ್ಗೆ ಪ್ರಾರ್ಥನೆ ಯೊಂದಿಗೆ ಪ್ರಾರಂಭಗೊಂಡು ವಿಷ್ಣುವಿನ ದಶಾವತಾರದ ಅರ್ಥ ಬರುವ ಹಾಗೆ 10 ಕುಂಡಗಳನ್ನು ನಿರ್ಮಿಸಿ ಪ್ರದಾನ ಕುಂಡದಲ್ಲಿ ವೈದಿಕರಿಂದ ಇನ್ನುಳಿದ 9 ಕುಂಡಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಯೊಂದಿಗೆ 1 ಕೋಟಿ ರಾಮ ನಾಮ ಜಪಗಳನ್ನು ಸಮರ್ಪಿಸಿ ಪೂರ್ಣಾಹುತಿಯೊಂದಿಗೆ ಸಂಪನ್ನ ಗೊಂಡಿತು .

ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ಭಾರತಕ್ಕೆ 20 ಸಾವಿರ ವರ್ಷಗಳ ಇತಿಹಾಸವಿದ್ದು, ಜಗತ್ತಿನ ಹಿರಿಯ ಶಕ್ತಿಯಾಗಿರುವ ಅಮೇರಿಕಕ್ಕೆ ಕೇವಲ 500 ವರ್ಷಗಳ ಇತಿಹಾಸ ಹೊಂದಿದೆ. ಈ ದೇಶದಲ್ಲಿ ಧಾಮರ್ಿಕ ನಂಬಿಕೆ ಮತ್ತು ರಾಷ್ಟ್ರಭಕ್ತಿ ನಮ್ಮ ರಕ್ತದಲ್ಲಿ ತುಂಬಿಕೊಂಡಿದೆ ಎಂದರು.
ಆರ್ಎಸ್ಎಸ್ ಮುಖಂಡ ಡಾ.ಕೆ. ಪ್ರಭಾಕರ ಭಟ್, ಸಮಿತಿ ಅಧ್ಯಕ್ಷ ಉಮೇಶ ಸುವರ್ಣ ತುಂಬೆ, ಗೌರವ ಸಲಹೆಗಾರ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಪುರೋಹಿತ ಕಶೆಕೋಡಿ ಸೂರ್ಯನಾರಾಯಣ ಭಟ್ ಮತ್ತಿತರರು ಶುಭ ಹಾರೈಸಿದರು.
ಸುಮಾರು ಮೂರು ಸಾವಿರಕ್ಕೂ ಮಿಕ್ಕಿ ಮಂದಿ ಭಕ್ತರು ಪಾಲ್ಗೊಂಡಿದ್ದು, ರಾಮ ತಾರಕ ಮಂತ್ರದೊಂದಿಗೆ ಯಜ್ಞಕುಂಡಕ್ಕೆ ಹವಿಸ್ಸು ಸಮರ್ಪಿಸಿದರು.
ಸಮಿತಿ ಸಂಚಾಲಕ ದಾಮೋದರ ನೆತ್ತರಕೆರೆ ಸ್ವಾಗತಿಸಿ, ಉಮೇಶ ರೆಂಜೋಡಿ ವಂದಿಸಿದರು. ಜಗದೀಶ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿದರು.
ಆಮೇಲೆ ನಡೆದ ದರ್ಮ ಸಭೆಯು ಆಳ್ವಾಸ್ ವಿದ್ಯಾ ಸಂಸ್ಥೆ ಯ ಡಾ . ಮೋಹನ ಆಳ್ವ ರ ಅದ್ಯಕ್ಷೆತೆ ಯಲ್ಲಿ ಪುಂಡರಿಕಾಕ್ಷ ಯೋಗಾಚಾರ್ಯ ಬೆಳ್ಳೂರು ರವರು ಶ್ರೀ ರಾಮ ಪಥದರ್ಶನ ನಡೆಸಿಕೊಟ್ಟರು ವೇದಿಕೆಯಲ್ಲಿ ಡಾ . ಪ್ರಭಾಕರ ಭಟ್ ಕಲ್ಲಡ್ಕ , ಶ್ರೀ ಕೊಡಮಣ್ಣು ಕಾಂತಪ್ಪ ಶೆಟ್ಟಿ , ಕಶೆ ಕೊಡಿ ಸೂರ್ಯ ನಾರಾಯಣ ಭಟ್ , ಶ್ರೀ ರಾಮ ನಾಮ ತಾರಕ ಜಪ ಯಜ್ಞ ಸಮಿತಿ ಯ ಅದ್ಯಕ್ಷರಾದ ಶ್ರೀ ಉಮೇಶ್ ಸುವರ್ಣ , ಸಂಚಾಲಕ ಶ್ರೀ ದಾಮೋದರ ನೆತ್ತರಕೆರೆ ಸ್ವಾಗತಿಸಿದರು , ಉಮೇಶ್ ರೆಂಜೊಡಿ ದನ್ಯವಾದ ಸಲ್ಲಿಸಿದರು , ಆನಂತರ ವೇದಿಕೆ ಯಲ್ಲಿ ತಾಳಮದ್ದಲೆ ಶ್ರೀ ರಾಮ ಕಾರುಣ್ಯ ಎಂಬ ಯಕ್ಷಗಾನ ತಾಳಮದ್ದಲೆ ನಡೆಯಿತು





















