ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಹೊಸ ಪಿಂಚಣಿ ಯೋಜನೆ ಎನ್ಪಿಎಸ್ ಸಂಘಟನೆ ವತಿಯಿಂದ ಬಿ.ಸಿ.ರೋಡ್ನಲ್ಲಿ ಭಾನುವಾರ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಕಳೆದ 2006ರ ಬಳಿಕ ಸರ್ಕಾರಿ ನೌಕರರಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ವೇತನದಿಂದಲೇ ಕಡಿತಗೊಳಿಸಿದ ನಿಗದಿತ ಮೊತ್ತವನ್ನು ವಿವಿಧ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೂಲಕ ಸರ್ಕಾರ ಅನುಷ್ಠಾನಗೊಳಿಸಿರುವ ಹೊಸ ಪಿಂಚಣಿ ಯೋಜನೆ (ಎನ್ಪಿಎಸ್) ಅವೈಜ್ಞಾನಿಕ ಮತ್ತು ನಷ್ಟದಾಯಕವಾಗಿದೆ ಎಂದು ಮೆಸ್ಕಾಂ ಅಧಿಕಾರಿ ಪ್ರಶಾಂತ ಪೈ ತಿಳಿಸಿದರು.
27btl-Sangha
ಇದೇ ವೇಳೆ ಜಿಲ್ಲಾ ಮಟ್ಟದ ಎನ್ಪಿಎಸ್ ಸಂಘಟನೆ ರಚಿಸಲಾಯಿತು. ಜಿಲ್ಲಾಧ್ಯಕ್ಷರಾಗಿ ಇಬ್ರಾಹಿಂ, ಕಾರ್ಯದರ್ಶಿಯಾಗಿ ಆದರ್ಶ ಆಯ್ಕೆಗೊಂಡರು. ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ, ಪ್ರಧಾನ ಕಾರ್ಯದರ್ಶಿ ನಾಗನಗೌಡ, ಸಂಘಟನಾ ಕಾರ್ಯದರ್ಶಿ ಶಶಿಕಲಾ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು, ಪ್ರಮುಖರಾದ ಕೆ.ರಮೇಶ ನಾಯಕ್ ರಾಯಿ, ಶಿವಶಂಕರ ಭಟ್, ಶಿವಪ್ರಸಾದ್, ನವೀನ ಪಿ.ಎಸ್., ಸಂತೋಷ್ ಕುಮಾರ್ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *