ಬಂಟ್ವಾಳ: ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸಮೀಪದ ಮಂಚಕಲ್ಲು ಎಂಬಲ್ಲಿ ನ್ಯಾಯಾಲಯ ನಿರ್ಬಂಧ ನಡುವೆಯೂ ಒಂಟಿ ಮಹಿಳೆಯೊಬ್ಬರ ಮನೆ ಬಳಿ ಜಮೀನು ಅಳತೆ ಮಾಡಿ ಅಕ್ರಮ ತಡೆಬೇಲಿ ನಿರ್ಮಿಸುತ್ತಿದ್ದ ವೇಳೆ ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಧಾವಿಸಿ ಬಂದು ಬೇಲಿ ತೆರವುಗೊಳಿಸಿ ನ್ಯಾಯಾಲಯ ಆದೇಶ ಪಾಲಿಸುವಂತೆ ಎಚ್ಚರಿಸಿದ ಘಟನೆ ಮಂಗಳವಾರ ನಡೆದಿದೆ.
ಇಲ್ಲಿನ ನಿವಾಸಿ ದಿವಂಗತ ಯೂಸುಫ್ ಎಂಬವರಿಂದ ಕಳೆದ 2011ನೇ ಏ.27ರಂದು ಕ್ರಯಪತ್ರ ಮೂಲಕ ಸತೀಶ ಕುಮಾರ್ ಎಂಬವರು ಪಡೆದುಕೊಂಡಿರುವ 20 ಸೆಂಟ್ಸ್ ಜಮೀನಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಮನೆ ನಿರ್ಮಿಸುವ ವೇಳೆ ಇವರಿಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಇಂಜಕ್ಷನ್ ಮತ್ತು ಕೋರ್ಟು ಕಮಿಶನ್ ಆದೇಶ ತಂದು ಬಳಿಕ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಭೂಮಾಪಕ ಅಧಿಕಾರಿ ಸಹಿತ ಕಂದಾಯ ಇಲಾಖೆಗೆ ಲಿಖಿತ ಮಾಹಿತಿ ರವಾನಿಸಿದ್ದರೂ, ಸೋಮವಾರ ತರಾತುರಿಯಲ್ಲಿ ಜಮೀನು ಅಳತೆಗೆ ಭೂಮಾಪಕರು ಬಂದು ಸ್ಥಳ ಗುರುತಿಸಿದ ಬಳಿಕ ವಾಪಾಸಾಗಿದ್ದಾರೆ. ಈ ನಡುವೆ ಮಂಗಳವಾರ ಮತ್ತೆ ಕಾರ್ಮಿಕರ ಮೂಲಕ ಅಕ್ರಮ ಬೇಲಿ ನಿರ್ಮಾಣಕ್ಕೆ ಯೂಸುಫ್ ಪತ್ನಿ ಜಮೀಲ ಮುಂದಾಗಿದ್ದಾರೆ ಎಂದು ಆರೋಪಿಸಿ ಸತೀಶ ಕುಮಾರ್ ಪತ್ನಿ ಗೀತಾ ಅವರು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು.
ತಕ್ಷಣವೇ ಠಾಣಾಧಿಕಾರಿ ಎ.ಕೆ.ರಕ್ಷಿತ್ ಕುಮಾರ್ ನೇತೃತ್ವದ ಪೊಲೀಸರು ಧಾವಿಸಿ ಬಂದು ಅಕ್ರಮ ತಡೆಬೇಲಿ ತೆರವುಗೊಳಿಸಿದ ಬಳಿಕ ಆರೋಪಿಗಳನ್ನು ಠಾಣೆಗೆ ಕರೆಸಿ ನ್ಯಾಯಾಲಯದಿಂದ ಅಂತಿಮ ತೀರ್ಮಾಣ ಬರುವತನಕ ಯಾವುದೇ ರೀತಿಯ ಕೆಲಸ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿರುವುದಾಗಿ ತಿಳಿಸಿದ್ದಾರೆ.
29btl-Purasabhe

29btl-Beli

29btl-Manchakalluಆರೋಪ:
ಇನ್ನೊಂದೆಡೆ ಕಳೆದ 2011ನೇ ಏ.27ರಂದು ಇಲ್ಲಿನ ನಿವಾಸಿ ದಿ.ಅಬ್ದುಲ್ ಖಾದ್ರಿ ಬ್ಯಾರಿ ಎಂಬವರ ಪುತ್ರ ಯೂಸುಫ್ ಎಂಬಾತನು ಸರ್ವೆ ನಂ.28/9ರಲ್ಲಿ ಒಟ್ಟು 2.21ಎಕ್ರೆ ಜಮೀನಿನ ಪೈಕಿ 20 ಸೆಂಟ್ಸ್ ಜಮೀನು ಮಾತ್ರ ಪಾಣೆಮಂಗಳೂರಿನ ನರಿಕೊಂಬು ನಿವಾಸಿ ಸತೀಶ್ ಕುಮಾರ್ ಎಂಬವರಿಗೆ ಕ್ರಯಪತ್ರ ಮೂಲಕ ಮಾರಾಟ ಮಾಡಿದ್ದಾನೆ. ಇದೇ ವೇಳೆ ಯೂಸುಫ್ ತನ್ನ ತಂದೆ ಅಬ್ದುಲ್ ಖಾದ್ರಿ ಬ್ಯಾರಿಗೆ ಒಬ್ಬನೇ ಪುತ್ರ ಎಂದು ನಕಲಿ ದಾಖಲೆ ಸೃಷ್ಟಿಸಿ ಎಲ್ಲಾ ಜಮೀನನ್ನು ತನ್ನ ಪತ್ನಿ ಜಮೀಲನ ಹೆಸರಿಗೆ ದಾನಪತ್ರ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಈತನ ಮೂವರು ಸಹೋದರರು ಮತ್ತು ಮೂವರು ಸಹೋದರಿಯರು ನ್ಯಾಯಾಲಯ ಮೆಟ್ಟಿಲು ಏರಿದ್ದರು.
ಈ ನಡುವೆ ಇವರೆಲ್ಲರೂ ಮತ್ತೆ ನ್ಯಾಯಾಲಯದಲ್ಲಿ ಸಂಧಾನ ಪ್ರಕ್ರಿಯೆ ಮೂಲಕ ಜಮೀನು ಹಂಚಿಕೊಂಡ ಬಳಿಕ ಯೂಸುಫ್ ತೀರಿಕೊಂಡಿದ್ದಾನೆ ಎಂದು ಆರೋಪಿಸಿ ಸತೀಶ ಕುಮಾರ್ ಪತ್ನಿ ಗೀತಾ ಅವರು ಈ ಹಿಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

By suddi9

Leave a Reply

Your email address will not be published. Required fields are marked *