ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ಮಂದಿರದ ಪುನರ್ ಪ್ರತಿಷ್ಠಾ ಮಹೋತ್ಸವವು ಏ.19 ರಿಂದ 22 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈವಿಧ್ಯಪೂರ್ಣವಾಗಿ ನಡೆಯಲಿದೆ ಎಂದು ಮಂದಿರ ಜೀಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ|| ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದ್ದಾರೆ.
ಶ್ರೀರಾಮ ಭಜನಾ ಮಂದಿರದ ನೂತನ ಸಭಾಮಂದಿರದಲ್ಲಿ ಮಾ.27ರಂದು ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ವಿವರ ನೀಡಿದರು.
ದ.ಕ ಜಿಲ್ಲೆಯಲ್ಲೇ ಐತಿಹಾಸಿಕವಾಗಿ ನಿರ್ಮಾಣವಾಗುತ್ತಿರುವ 108 ಮೆಟ್ಟಿಲುಗಳ ಮೇಲ್ಗಡೆ ಶ್ರೀರಾಮ ಮಂದಿರದ 39 ಅಡಿ ಎತ್ತರದ ಶಿಲಾಮಯ ಮಂದಿರ, ಶ್ರೀರಾಮನ ವಿಗ್ರಹದ ಪ್ರತಿಷ್ಠಾಪನೆಗೊಳ್ಳಲಿದೆ. ಈ ಸಂದರ್ಭದಲ್ಲಿ ಭಕ್ತಾದಿಗಳ ಬೃಹತ್ ಸಂಖ್ಯೆಯನ್ನು ನಿರೀಕ್ಷಿಸಲಾಗಿದ್ದು ವ್ಯವಸ್ಥೆಗಾಗಿ ಸ್ವಯಂಸೇವಕರ ವಿವಿಧ ಸಮಿತಿಗಳನ್ನು ರಚಿಸಲಾಯಿತು.bhat

ಸಮಿತಿಗಳ ಪ್ರಮುಖರಿಗೆ ಜವಾಬ್ದಾರಿಗಳ ಬಗ್ಗೆ ತಿಳಿಸಲಾಯಿತು. ಸ್ವಾಗತ ಸಮಿತಿ, ಆರ್ಥಿಕ ಸಮಿತಿ, ಅತಿಥಿ ಸತ್ಕಾರ ಸಮಿತಿ, ವೈದಿಕ ಸಮಿತಿ, ಸಾಂಸ್ಕೃತಿಕ ಸಮಿತಿ, ಭಜನಾ ಸಮಿತಿ, ಮಾತೃ ಸಮಿತಿ, ಊಟೋಪಚಾರ ಸಮಿತಿ, ಮಾಧ್ಯಮ ಸಮಿತಿ, ಪ್ರಚಾರ ಸಮಿತಿ, ಉಗ್ರಾಣ ಸಮಿತಿ, ಸ್ವಚ್ಛತಾ ಸಮಿತಿ, ರಕ್ಷಣಾ ಸಮಿತಿ, ಸಾರಿಗೆ/ಪಾರ್ಕಿಂಗ್ ಸಮಿತಿ, ವಿದ್ಯುತ್ ಜಲ ಸಮಿತಿ, ಹೊರೆಕಾಣಿಕೆ ಸಮಿತಿ, ಸ್ವಯಂಸೇವಕರ ಸಮಿತಿ, ವೇದಿಕೆ ಸಮಿತಿ, ಅಲಂಕಾರ ಸಮಿತಿ, ಕಾಯರ್ಾಲಯ ನಿರ್ವಹಣಾ ಸಮಿತಿ, ನಗರ ಅಲಂಕಾರ ಸಮಿತಿ, ಬೊಂಡಾಭಿಷೇಕ ಸಮಿತಿ, ಪ್ರಸಾದ ಸಮಿತಿ, ದೀಪೋತ್ಸವ ಸಮಿತಿ, ಆರೋಗ್ಯ ಸಮಿತಿ, ಚಪ್ಪರ ಸಮಿತಿ, ವಸತಿ ಸಮಿತಿಯನ್ನು ರಚಿಸಲಾಯಿತು. 19ರಂದು ಹೊರೆಕಾಣಿಕೆ ಮೆರವಣಿಗೆ 20 ರಂದು ವಿವಿಧ ವೈದಿಕ ಕಾರ್ಯಗಳು. 21ರಂದು ಶ್ರೀರಾಮ ಶಿಲಾ ಪ್ರತಿಮೆಗಳ ಪ್ರತಿಷ್ಠಾಪನೆ, ಸಾಮೂಹಿಕ ಬೊಂಡಾಭಿಷೇಕ ನಡೆಯಲಿದೆ. 22ರಂದು ಕೋಟಿ ರಾಮನಾಮ ಜಪ ಸಮಾಪನಾ, ಸಂಜೆ ದೀಪೋತ್ಸವ ನಡೆಯಲಿದೆ. ಪ್ರತಿ ದಿನ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಏ.03ರಂದು ಶ್ರೀರಾಮ ಸಹಿತ ವಿವಿಧ ಶಿಲಾ ವಿಗ್ರಹಗಳನ್ನು ಬೆಳ್ತಂಗಡಿ ತಾಲೂಕಿನ ನಾರಾವಿಯಿಂದ ವೈಭವದ ಮೆರವಣಿಗೆಯಲ್ಲಿ ಕಲ್ಲಡ್ಕಕ್ಕೆ ತರಲಾಗುವುದು. ಏ.09ರಿಂದ 15ರವರೆಗೆ ಮನೆಮನೆಗೆ ಜ್ಯೋತಿ ಹಾಗೂ 15ರಿಂದ ನಿರಂತರ ಭಜನಾ ಕಾರ್ಯಕ್ರಮವಿರುತ್ತದೆ ಎಂದು ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ|| ಪ್ರಭಾಕರ ಭಟ್ ಕಲ್ಲಡ್ಕ ಮಾರ್ಗದರ್ಶನ ಮಾಡಿದರು. ವೇದಿಕೆಯಲ್ಲಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಕಾರ್ಯಧ್ಯಕ್ಷ ಜಿತೇಂದ್ರ ಎಸ್. ಕೊಟ್ಟಾರಿ, ಆಡಳಿತ ಸಭೆಯ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಕಾರ್ಯದರ್ಶಿ ಕ.ಕೃಷ್ಣಪ್ಪ ಉಪಸ್ಥಿತರಿದ್ದರು.
ಪ್ರಮುಖರಾದ ನಾರಾಯಣ ಸೋಮಯಾಜಿ, ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು, ಜಿ. ಆನಂದ, ಗೋವಿಂದ ಪ್ರಭು, ದೇವದಾಸ್ ಶೆಟ್ಟಿ ಬಂಟ್ವಾಳ ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು.

By suddi9

Leave a Reply

Your email address will not be published. Required fields are marked *