ಬಂಟ್ವಾಳ:ತಾಲ್ಲೂಕಿನ ಸಜಿಪಮೂಡ ಗ್ರಾಮದ ಸುಭಾಶ್ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಬ್ರಹ್ಮಶ್ರೀ ನಾರಾಯಣಗುರು ಜ್ಞಾನಮಂದಿರ’ವು ಇದೇ 21ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಹೇಳಿದರು.
ಈ ಬಗ್ಗೆ ಈಚೆಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

5btl-Sajipamuda
ಏ.20ರಂದು ಮಧ್ಯಾಹ್ನ 2ಗಂಟೆಗೆ ಮೆಲ್ಕಾರ್ ಬಿರ್ವ ಸೆಂಟರ್ ಬಳಿಯಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ಮತ್ತು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಪಂಚಲೋಹದ ವಿಗ್ರಹ ಶೋಭಾಯಾತ್ರೆ ನಡೆಯಲಿದೆ. ಇದೇ ವೇಳೆ ಯುವವಾಹಿನಿ ಘಟಕದ ವತಿಯಿಂದ ಬೈಕ್ ರ್ಯಾಲಿ ಆಯೋಜಿಸಲಾಗಿದೆ. ಅಂದು ರಾತ್ರಿ ಧಾರ್ಮಿಕ ಸಭೆ, ಅನ್ನಸಂತರ್ಪಣೆ, ಯಕ್ಷಗಾನ ಕಾರ್ಯಕ್ರಮವೂ ಇದೆ. ಏ.21ರಂದು ಬೆಳಿಗ್ಗೆ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಮೂರ್ತಿ ಪ್ರತಿಷ್ಠೆ, ಬ್ರಹ್ಮಕಲಾಶಾಭಿಷೇಕ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗುರುಮಂದಿರ ಲೋಕಾರ್ಪಣೆಗೊಳಿಸುವರು ಎಂದು ಅವರು ವಿವರಿಸಿದರು.
ಪ್ರಮುಖರಾದ ಕೆ.ಹರಿಕೃಷ್ಣ ಬಂಟ್ವಾಳ್, ಬೇಬಿ ಕುಂದರ್, ಭುವನೇಶ್ ಪಚ್ಚಿನಡ್ಕ, ಪ್ರೇಮನಾಥ್, ಪ್ರಕಾಶ್ ಅಂಚನ್, ಮಹಾಬಲ ರೈ, ಎಂ.ಪರಮೇಶ್ಚರ, ಸೀತಾರಾಮ ರೈ, ಯಶವಂತ ಪೂಜಾರಿ, ಚಂದ್ರಹಾಸ ಪೂಜಾರಿ, ಜಯಶಂಕರ ಪೆರ್ವ, ರಮೇಶ್ ಅನ್ನಪ್ಪಾಡಿ, ಲೋಕೇಶ್ ಪೂಜಾರಿ, ಶಂಕರ ಯಾನೆ ಕೋಚ ಪೂಜಾರಿ, ರವಿ ಪೂಜಾರಿ, ವಾಸುದೇವ ಪೂಜಾರಿ, ಲೋಕನಾಥ ಪೂಜಾರಿ, ಮುತ್ತಪ್ಪ ಪೂಜಾರಿ, ಶಾರದಾ ಎಲ್.ಪೂಜಾರಿ, ಕುಸುಮ, ಪುಷ್ಪಾವತಿ, ರಾಜೆಶ್ ಸುವರ್ಣ, ವಿಶ್ವನಾಥ್ ಬಿ., ಗಣಪತಿ ಭಟ್, ರಮೇಶ್ ಮೂಲ್ಯ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡರು.
ಗಿರೀಶ್ ಕುಮಾರ್ ಪೆರ್ವ ಸ್ವಾಗತಿಸಿ, ರತ್ನಾಕರ ಪೂಜಾರಿ ನಾಡಾರು ವಂದಿಸಿದರು.
—

By suddi9

Leave a Reply

Your email address will not be published. Required fields are marked *