ಬಂಟ್ವಾಳ: ನೀರಿಲ್ಲದೆ ಒಳಗಿದ್ದ ಕೆರೆಯಾಳದಲ್ಲಿ ಮಣ್ಣುಅಗೆದು ನೀರು ಹುಡುಕುವಆಟದೊಂದಿಗೆ ಮಣಿನಾಲ್ಕೂರು ಪಚ್ಚೆ ಅಂಗಳದಲ್ಲಿ ಆಯೋಜನೆಗೊಂಡ ‘ಪಚ್ಚೆಪರ್ಬ 2016’ 4ನೇ ವರ್ಷದ ಮಕ್ಕಳ ಪರಿಸರ ಶಿಬಿರ ಉದ್ಘಾಟನೆಗೊಂಡಿತು.ಸ್ಥಳೀಯ ಮಕ್ಕಳೊಂದಿಗೆ ರಾಜ್ಯದ ವಿವಿದೆಡೆಗಳಿಂದ ಆಗಮಿಸಿದ ಯುವಜನರು, ಅತಿಥಿಗಳು, ನೆಂಟರು, ಸಾಮಾಜಿಕಕಾರ್ಯಕರ್ತರುಇದಕ್ಕೆ ಸಾಕ್ಷಿಯಾದರು.

_DSC0926 (1)

_DSC1040

_DSC1048

_DSC1103

_DSC1388
ನೀರೆಂಬುದು ಬಯಸಿದಾಗಲೆಲ್ಲಾ ಸಿಗುವ ಮಾಯಾವಸ್ತುಅಲ್ಲ… ಎಂಬ ಶಿಬಿರ ಗೀತೆಯ ಮೂಲಕ ‘ನೀರು ನಮ್ಮ ಸಂಸ್ಕøತಿ’ ಎಂಬ ಆಶಯವನ್ನು ಈ ಸಲದ ಶಿಬಿರವು ಮಕ್ಕಳು ಮತ್ತುಯುವಜನರಿಗೆ ಹಂಚುವಲ್ಲಿಯಶಸ್ಸು ಸಾಧಿಸಲುಆರಂಭ ಸಿಕ್ಕಿದೆ.ಕೆರೆಯಾಳದಿಂದ ಬಗೆದ ಮಣ್ಣನ್ನು ಮಾನವ ಸರಪಳಿ ಮೂಲಕ ಕುಕ್ಕುದಡಿಗೆ ತಲುಪಿಸಿ ಕಲಾವಿದ ಶಿವಾನಂದ ಉಳಿ ಅವರಿಂದ ನೀರಿನ ಬವಣೆ ನಿರೂಪಿಸುವ ಮಣ್ಣಿನ ಉಬ್ಬುಶಿಲ್ಪ ರಚಿಸಲಾಯಿತು.ತಾಸೆ, ಡೋಲು, ಚೆಂಡೆ ಕಲರವಗಳ ಮೂಲಕ ನೃತ್ಯದ ಸಂಬ್ರಮ, ಹಳ್ಳಿಗೋಗೋಣ ನಾವು.. ಹಾಡಿನ ಮೂಲಕ ಪರಿಸರ ಪ್ರೀತಿ, ನೀರಿನಅತಿಕಡಿಮೆ ಬಳಕೆ ಮತ್ತು ಪರಿಸರದ ನೈಜ ಸ್ಥಿತಿಗತಿಗಳ ಅರ್ಥೈಸುವಿಕೆ, ಅಜ್ಜಿಮನೆಯಲ್ಲಿ ಹಿರಿಯರಂಗಕರ್ಮಿಐವನ್ ಡಿ.ಸಿಲ್ವಾ ಅವರ ವಿಜ್ಞಾನಅಭಿನಯಗೀತೆ, ನಿನಾಸಂ ರಂಗಕಲಾವಿದರಾದ ಮೋಹನï ಶೇಣಿ, ಬಿಂದುರಕ್ಷಿದಿ ಅವರ ಸಿಗ್ನೇಚರ್ ಕುಣಿತ, ಹÀಳ್ಳಿ ಸೊಗಡಿನಆಹಾರ-ಕಷಾಯ, ನೇಲೆಚಕ್ರದ ನೇತಾಟ, ಜೋಕಾಲಿ ಜೀಕಾಟ, ಶಾಲಾ/ಕಾಲೇಜಿನ ಪಾಠ-ಪ್ರವಚನ ಮೀರಿದ ಮುಕ್ತ ಕಲಿಕೆ… ಇವೆಲ್ಲವೂಈಪಚ್ಚೆಪರ್ಬದ ಕೆಲವು ಝಲಕ್‍ಗಳು.ಉದ್ಘಾಟನಾಚಟುವಟಿಕೆಯೂಯಾವುದೇ ಅತಿಥಿಗಳ ಭಾಷಣ, ಪಾಠಗಳಿಲ್ಲದೆ ಮಕ್ಕಳ ಮುಕ್ತ ವೇದಿಕೆಯಾಗಿ ಭಿನ್ನವಾಗಿಗುರುತಿಸಕೊಂಡಿತು.ಸಂಜೆಅರಿವು ಪಚ್ಚೆ ಬಳಗದ ಯುವಜನರಿಂದ ನಡೆದ ‘ಪರತಿ ಮಂಙಣೆ’ ರಂಗ ನಾಟಕ ಗಮನಸೆಳೆಯಿತು.
ರಂಗಸಾಂಗತ್ಯ ಮಣಿನಾಲ್ಕೂರು, ಅರಿವು ಪಚ್ಚೆ ಬಳಗ ಬಂಟ್ವಾಳ, ಅರಿವುಯುವ ಸಂವಾದಕೇಂದ್ರ, ದ.ಕ.ಜಿಲ್ಲೆ. ಸಂಸ್ಥೆಗಳು ಸಂಯೋಜಿಸಿರುವ ಪಚ್ಚೆಪರ್ಬ 2016, ಶಿಬಿರವು ಇದೇಎಪ್ರಿಲ್13ರಂದು ಸಮಾಪನಗೊಳ್ಳಲಿದೆ.

By suddi9

Leave a Reply

Your email address will not be published. Required fields are marked *