ಸಂದರ್ಶ್ ಶೆಟ್ಟಿ `ಮಿಸ್ಟರ್ಬಂಟ್’- ಡಾ| ನಿಶಾ ಶೆಟ್ಟಿ `ಮಿಸ್ಬಂಟ್’
ಮುಂಬಯಿ, ಎ.16: ಬಂಟರ ಸಂಘ ಮುಂಬಯಿ ಇದರ ಯುವ ವಿಭಾಗವು ಮಾತೃಭೂಮಿ ಕೋ.ಅಪರೇಟಿವ್ ಸೊಸೈಟಿ ಲಿಮಿಟೆಡ್ ಮತ್ತು ಧೀರಜ್ ಮೋಶÀನ್ ಪಿಕ್ಚರ್ಸ್ ಸಹಯೋಗದಿಂದ ಆಯೋಜಿಸಿರುವ ಆಕಾಂಕ್ಷ -2016 ಸ್ಪರ್ಧೆಯಲ್ಲಿ ಮಂಗಳೂರು ಬಜ್ಪೆ ಮೂಲದ ಸಂದರ್ಶ್ ಸುರೇಶ್ ಶೆಟ್ಟಿ `ಮಿಸ್ಟರ್ಬಂಟ್’ ಹಾಗೂ ಪೆರಾರ ಮೂಲದ ಡಾ| ನಿಶಾ ದಯಾನಂದ ಶೆಟ್ಟಿ `ಮಿಸ್ಬಂಟ್’ ವಿಜೇತರೆಣಿಸಿ ಕಿರೀಟವನ್ನು ಮುಡಿಗೇರಿಸಿ ಕೊಂಡರು.
ಇಂದಿಲ್ಲಿ ಶನಿವಾರ ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನೇರವೇರಿದ ಭವ್ಯ ಆಕಾಂಕ್ಷ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ಶಿವಸೇನೆಯ ಯುವಸೇನಾ ಅಧ್ಯಕ್ಷ ಆದಿತ್ಯ ಉದ್ಧಾವ್ ಠಾಕ್ರೆ ಉಪಸ್ಥಿತರಿದ್ದು, ಸರ್ವ ಸ್ಪರ್ಧಿಗಳಿಗೆ ಶುಭಾರೈಸಿದÀರು.
ಗೌರವ ಅತಿಥಿüಗಳಾಗಿ ಮಾತೃಭೂಮಿ ಕೋ.ಅಪರೇಟಿವ್ ಸೊಸೈಟಿ ಲಿಮಿಟೆಡ್ನ ಕಾರ್ಯಾಧ್ಯಕ್ಷ ಸಿಎ| ಶಂಕರ್ ಬಿ.ಶೆಟ್ಟಿ ಮತ್ತು ಧೀರಜ್ ಮೋಶÀನ್ ಪಿಕ್ಚರ್ಸ್ನ ಧೀರಜ್ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಲತಾ ವಿ.ಶೆಟ್ಟಿ ಕರ್ನಿರೆ, ಉಪಸ್ಥಿತರಿದ್ದು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿವೇಕ್ ವಿ.ಶೆಟ್ಟಿ ಅವರು ವಿಜೇತರಿಗೆ ಕಿರೀಟ ತೊಡಸಿ ಪುಷ್ಫಗುಪ್ಚ, ಸ್ಮರಣಿಕೆ, ನಗದು ಪ್ರದಾನಿಸಿ ಅಭಿನಂದಿಸಿ ದರು. ಹಾಗೂ ಕಾರ್ಯಕ್ರಮ ಸಂಯೋಜಕರು, ಪ್ರಾಯೋಜಕರು, ಪೆÇ್ರೀತ್ಸಾಹಕರನ್ನು ಗೌರವಿಸಿದರು.
`ಮಿಸ್ಟರ್ಬಂಟ್’ನ ಪ್ರಥಮ ರನ್ನರ್ ಸ್ಥಾನವನ್ನು ರಜತ್ ಶೆಟ್ಟಿ ಮೂಡಬಿದ್ರೆ ಹಾಗೂ ದ್ವಿತೀಯ ರನ್ನರ್ ಮತ್ತು ಮಿಸ್ಟರ್ ಪೆÇಪ್ಯುಲರ್ ಆಗಿ ಧೀರಜ್ ರೈ ಅಂಬಲಮೊಗರು, `ಮಿಸ್ಬಂಟ್’ನ ಪ್ರಥಮ ರನ್ನರ್ ಆಗಿ ಕೃಶ್ಮಿತಾ ಶೆಟ್ಟಿ ಇನ್ನಂಜೆ ಹಾಗೂ ದ್ವಿತೀಯ ರನ್ನರ್ ಆಗಿ ಡಾ| ರಚನಾ ಶೆಟ್ಟಿ ತಲಕಟ್ಟೆ ಅವರು ವಿಜೇತರಾದರು.
ಉಪ ಕಾರ್ಯಾಧ್ಯಕ್ಷ ನವೀನ್ ವಿ.ಶೆಟ್ಟಿ ಗೌ| ಕೋಶಾಧಿಕಾರಿ ಸುಶಾಂತ್ ಎಸ್.ಶೆಟ್ಟಿ, ಜತೆ ಕಾರ್ಯದರ್ಶಿ ಧೀರಾಜ್ ಎಸ್.ಶೆಟ್ಟಿ, ಜತೆ ಕೋಶಾಧಿಕಾರಿ ಶರತ್ ವಿ.ಶೆಟ್ಟಿ ಮತ್ತಿತರ ಪದಾಧಿಕಾರಿಗಳು, ಸಂಘದ ಉಪಾಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನದಾಸ್ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಐ.ಆರ್ ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್ಕುಮಾರ್ ಶೆಟ್ಟಿ ಕುತ್ಯಾರ್, ಜತೆ ಕೋಶಾಧಿಕಾರಿ ಮಹೇಶ್ ಎಸ್.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಾಂತಿ ಡಿ.ಶೆಟ್ಟಿ ಪ್ರಾರ್ಥನೆಗೈದರು. ಯುವ ವಿಭಾಗಧ್ಯಕ್ಷ ವಿವೇಕ್ ವಿ.ಶೆಟ್ಟಿ ಸ್ವಾಗತಿಸಿದರು. ರಿಷಿಕಾ ವಿಶ್ವನಾಥ್ ಶೆಟ್ಟಿ ವಿಜೇತರ ಪಟ್ಟಿ ವಾಚಿಸಿದರು. ಅಶೋಕ್ ಪಕ್ಕಳ, ವೈಷ್ಣವಿ ಶೆಟ್ಟಿ, ಪ್ರತೀಕ್ ಶೆಟ್ಟಿ ಮತ್ತು ಶುಭಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಯುವ ವಿಭಾಗದ ಪ್ರ| ಕಾರ್ಯದರ್ಶಿ ಶ್ರೀಮಾ ಆರ್ ಶೆಟ್ಟಿ ವಂದಿಸಿದರು.






