ಬಂಟ್ವಾಳ: ತಾಲೂಕಿನ 8 ಗ್ರಾ.ಪಂ.ಗಳಿಗೆ ಭಾನುವಾರ ಶಾಂತಿಯುತವಾಗಿ ಉಪಚುನಾವಣೆ ನಡೆದಿದ್ದು, ಶೇ.68.14 ಮತದಾನವಾಗಿದೆ. ಬಾಳ್ತಿಲ, ಬಾಳೆಪುಣಿ, ಮಂಚಿ, ಅನಂತಾಡಿ, ಕೆದಿಲ, ವಿಟ್ಲಮುಡ್ನೂರು , ಸಾಲೆತ್ತೂರು ಹಾಗೂ ಕನ್ಯಾನ ಗ್ರಾಮಗಳಲ್ಲಿ ತೆರವಾಗಿದ್ದ ಒಟ್ಟು 11 ಸ್ಥಾನಗಳಿಗೆ ಉಪ ಚುನಾವಣೆ ನಡೆಯಿತು.
9680 ಮತದಾರ ಪೈಕಿ 6596 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 3345 ಪುರುಷರು ಹಾಗೂ 3251 ಮಹಿಳೆಯರಾಗಿದ್ದಾರೆ.
