ಬಂಟ್ವಾಳ:ಇಲ್ಲಿನ ಫರಂಗಿಪೇಟೆ ಸಮೀಪದ ಪುದು ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮವಾಗಿ ರಾಶಿ ಹಾಕಲಾಗಿದ್ದ ಮರಳನ್ನು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ.
ಜಿಲ್ಲಾ ಗಣಿ ಮತ್ತು ಭೂವಿಜ್ಞಾನಿ ಗಿರೀಶ ಮೋಹನ್ ನೇತೃತ್ವದ ತಂಡವು ದಾಳಿ ನಡೆಸಿ ಇಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಲಕ್ಷಾಂತರ ಮೌಲ್ಯದ 600 ಟನ್ ಮರಳು ವಶಪಡಿಸಿಕೊಂಡಿದ್ದಾರೆ.
ಈ ಪ್ರದೇಶದಲ್ಲಿ ಸರ್ಕಾರದ ಲೋಕೋಪಯೋಗಿ ಇಲಾಖೆಯು ಮಂಗಳೂರಿನ ಬಾಲರಾಜ್ ಎಂಬವರಿಗೆ ಮರಳು ಸಂಗ್ರಹಿಸಿಡಲು ಟೆಂಡರ್ ನೀಡಿದ್ದು, ಈ ಪ್ರದೇಶಕ್ಕೆ ತಡೆಬೇಲಿ ನಿರ್ಮಿಸಿಕೊಂಡಿದ್ದರು.

17btl-Puduಇದಕ್ಕೆ ಬದಲಾಗಿ ಮರಳು ದಂಧೆಕೋರರು ನೇತ್ರಾವತಿ ನದಿ ತೀರದಲ್ಲೇ ಅಕ್ರಮವಾಗಿ ಮರಳು ದಾಸ್ತಾನು ಇರಿಸಿ ಬಳಿಕ ರಾತ್ರಿ ವೇಳೆ ಬೆಂಗಳೂರು ಮತ್ತಿತರ ಕಡೆಗಳಿಗೆ ದುಪ್ಪಟ್ಟು ದರಕ್ಕೆ ಮಾರಾಟ ಮಾಡಲು ಸಾಗಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಪಟ್ಟ ಆರೋಪಿಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದ್ದು, ಇದೀಗ ವಶಪಡಿಸಿಕೊಂಡ ಮರಳು ಬಿ.ಸಿ.ರೋಡ್ ಮರಳು ಯಾರ್ಡ್‍ಗೆ ಸ್ಥಳಾಂತರಗೊಳಿಸಲಾಗುತ್ತಿದೆ. ಸಹಾಯಕ ಅಭಿಯಂತರ ಮಹಾದೇವಪ್ಪ, ಸಿಬ್ಬಂದಿ ಕೇಶವಮೂರ್ತಿ, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ ಭಟ್, ಕಿರಿಯ ಎಂಜಿನಿಯರ್ ಅರುಣ ಪ್ರಕಾಶ್,
ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
—

By suddi9

Leave a Reply

Your email address will not be published. Required fields are marked *