ಬಂಟ್ವಾಳ:ತಾಲ್ಲೂಕಿನ ಭಂಡಾರಿಬೆಟ್ಟು ಕಲಾಯಿ ರಸ್ತೆ ಬದಿ ಪುಟ್ಟ ಅಂಗಡಿಯೊಂದರಲ್ಲಿ ಶುಕ್ರವಾರ ತಡರಾತ್ರಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದ ಅಪಾರ ನಷ್ಟ ಉಂಟಾದ ಘಟನೆ ನಡೆದಿದೆ.
ಇಲ್ಲಿನ ನಿವಾಸಿ ಪ್ರಕಾಶ ಎಂಬವರು ಎಂದಿನಂತೆ ಶುಕ್ರವಾರ ರಾತ್ರಿ ತನ್ನ ಗೂಡಂಗಡಿ ಮುಚ್ಚಿ ಮನೆಗೆ ತೆಳಿದ್ದಉ ಎನ್ನಲಾಗಿದ್ದು, ತಡರಾತ್ರಿ ಸುಮಾರು ಹನ್ನೊಂದೂವರೆ ಗಂಟೆಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳೀಯರು ಗಮನಿಸಿ ಧಾವಿಸಿ ಬಂದು ನೀರು ಹಾಕಿದರೂ ಬಹುತೇಕ ಬೆಲೆಬಾಳುವ ಸಮಾಗ್ರಿ ಸುಟ್ಟು ಹೋಗಿದೆ ಎಂದು ದೂರಿಕೊಂಡಿದ್ದಾರೆ. ಸ್ಥಳೀಯ ಪುರಸಭಾ ಸದಸ್ಯ ಜಗದೀಶ ಕುಂದರ್ ಸಹಿತ ಇಲ್ಲಿನ ಗ್ರಾಮಕರಣಿಕ ಬಸವರಾಜ ಸನದಿ, ಸಹಾಯಕ ಸದಾಶಿವ ಕೈಕಂಬ ಮತ್ತಿತರರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.
—
