ಬಂಟ್ವಾಳ:ಗುರು ಪೂರ್ಣಿಮ ಅಂಗವಾಗಿ ಜು. 19ರಂದು ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿಜಿ ಟ್ರಸ್ಟ್ ಬಡ್ಡಕಟ್ಟೆಯಲ್ಲಿ ಬೆಳಿಗ್ಗೆ 8ಗಂಟೆಗೆ ಪೂಜೆ, ಭಜನೆ, ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ. ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀಜಿಯವರ 55ನೇ ಆರಾಧನಾ ಮಹೋತ್ಸವ ಅಂಗವಾಗಿ ಜು.31ರಂದು ಬೆಳಿಗ್ಗೆ ಪೂಜೆ, 9.ಗಂಟೆಗೆ ಅರ್ಚಕರಿಂದ, ಸ್ವಾಮೀಜಿಯ ಮೂರ್ತಿಗೆ ಸೀಯಾಳಾಭಿಷೇಕ, ಸಾರ್ವಜನಿಕರಿಂದ ಸಿಯಾಳಾಭಿಷೇಕ ನಡೆಯುವುದಾಗಿ ಟ್ರಸ್ಟ್ ಅಧ್ಯಕ್ಷ ಬಿ. ಯೋಗೀಶ ಸಪಲ್ಯ ತಿಳಿಸಿದ್ದಾರೆ.