ಮುಂಬಯಿ : ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಕರಾವಳಿಯ ಕನ್ನಡಿಗರಾದ ಮೊಯಾ (ಬೋವಿ) ಸಮಾಜ ಬಾಂಧವರು 25 ವರ್ಷಗಳ ಹಿಂದೆ ಮುಂಬಯಿ ಮಹಾನಗರದಲ್ಲಿ ಸ್ಥಾಪಿಸಿದ ಹಣಕಾಸು ಸಂಸ್ಥೆ ಮೊಯಾ ಕೋಪರೇಟಿವ್ ಕ್ರೆಡಿಟ್ ಸೊಸೈಟಿಯು ಯಶಸ್ವಿಯ ಹಾದಿಯಲ್ಲಿ ಮುನ್ನಡೆಯುತ್ತಿದ್ದು ಜುಲೈ 3 ರಂದು ದಾದರಿನ ಕಿಟ್ಟಿ ಭಂಡಾರಿ ಸಭಾಗೃಹದಲ್ಲಿ ತನ್ನ ಇಪ್ಪತೈದನೆಯ ವಾರ್ಷಿಕ ಮಹಾಸಭೆಯೊಂದಿಗೆ ಬೆಳ್ಳಿಹಬ್ಬವನ್ನು ಆಚರಿಸಿದೆ. ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಸತೀಶ್ ಎನ್. ಉಚ್ಚಿಲ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಮಹಾಸಭೆ ಹಾಗೂ ಬೆಳ್ಳಿಹಬ್ಬದ ಈ ಸಮಾರಂಭದಲ್ಲಿ ಕಾರ್ಯದರ್ಶಿ ಸಚ್ಚಿದಾನಂದ ಎ. ಐಲ್ ಅವರು ಎಲ್ಲಾ ಸದಸ್ಯರನ್ನು ಸ್ವಾಗತಿಸಿ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಸಭೆಯಲ್ಲಿ ಸಾದರಪಡಿಸಿದರು.DSC_1356

DSC_1359

ಮೊಯಾ ಕೋಪರೇಟಿವ್ ಕ್ರೆಡಿಟ್ ಸೊಸೈಟಿಯ ಮಾಜಿ ಕಾರ್ಯಕರ್ತರುಗಳ ಸಾಧನೆಯ ಬಗ್ಗೆ ಮಾತನಾಡಿದ ಕಾರ್ಯಾಧ್ಯಕ್ಷ ಸತೀಶ್ ಎನ್. ಉಚ್ಚಿಲ್ ಹಾಗೂ ಉಪಕಾರ್ಯಧ್ಯಕ್ಷ ಸುರೇಶ್ ವಾಮಂಜೂರು, ಜೊತೆ ಕಾರ್ಯದರ್ಶಿ ರಮೇಶ್ ಎಸ್. ಕುಂಬ್ಲೆ ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಇತರ ಗಣ್ಯರು ಕಳೆದ ಇಪ್ಪತೈದು ವರ್ಷಗಳಿಂದ ಸೊಸೈಟಿಯಲ್ಲಿ ದುಡಿದ ಮಾಜಿ ಅಧ್ಯಕ್ಷರುಗಳನ್ನು, ಸ್ಥಾಪಕ ಸದಸ್ಯರುಗಳನ್ನು ಹಾಗೂ ಉಪಸ್ಥಿತರಿದ್ದ ಇತರ ಗಣ್ಯರನ್ನು ಗೌರವಿಸಿದರು.

ಹಲವಾರು ವರ್ಷಗಳಿಂದ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸೊಸೈಟಿಯ ಹಿರಿಯ ಸದಸ್ಯ ನಾರಾಯಣ ಜೆ. ಐಲ್ ಅವರು ಸದಸ್ಯರುಗಳನ್ನುದ್ದೇಶಿಸಿ ಮೊಯಾ ಕೋಪರೇಟಿವ್ ಕ್ರೆಡಿಟ್ ಸೊಸೈಟಿಯ ಸ್ಥಾಪನೆ ಬಗ್ಗೆ ಮಾತನಾಡುತ್ತಾ ೧೯೯೧ ರಲ್ಲಿ ಸಮಾಜದ ಕೆಲವು ಗಣ್ಯರು ಉದ್ಯಮಿ ಕೆ.ಡಿ. ಉಚ್ಚಿಲ್ ಅವರ ಕಚೇರಿಯಲ್ಲಿ ಸೇರಿ ಸಮಾಜದ್ದೇ ಆದ ಕ್ರೆಡಿಟ್ ಸೊಸೈಟಿ ಯಾ ಕೋಪರೇಟಿವ್ ಬ್ಯಾಂಕಿನ ಅಗತ್ಯವಿದ್ದು ಮೊದಲು ಕೇವಲ 300 ಮಂದಿ ಸದಸ್ಯರ ನೋಂದಣಿ ಮಾಡಿ ನಂತರ ಸೊಸೈಟಿಯ ಸ್ಥಾಪನೆಗೆ ಬೇಕಾಗಿದ್ದ 500 ಮಂದಿ ಸದಸ್ಯರುಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದು ನಮಗೆ ಬೇಕಾಗಿದ್ದ ಹೆಸರಲ್ಲೇ ಮೊಯಾ ಕೋಪರೇಟಿವ್ ಕ್ರೆಡಿಟ್ ಸೊಸೈಟಿಯನ್ನು ಸ್ಥಾಪಿಸಲಾಯಿತು ಎಂದರು.

ಈ ಸಂಸ್ಥೆಯ ಅಭಿವೃದ್ದಿಗೆ ಸಮಾಜ ಬಾಂಧವರು ಹಾಗು ಇತರ ಸದಸ್ಯರುಗಳ ಸಹಕರಿಸುದರೊಂದಿಗೆ ಮುಂದೆ ಸಹಕಾರಿ ಬ್ಯಾಂಕ್ ಆಗಿ ಪರಿವರ್ತಿಸಲು ಸಹಕರಿಸಬೇಕೆಂದು ವಿನಂತಿಸಿದರು. ಸೊಸೈಟಿಯ ಇತರ ಪದಾಧಿಕಾರಿಗಳಾದ ಶರನ್ ಕುಮಾರ್ ಕೆ. ಐಲ್, ವಸಂತ್ ಪಿ. ಉಚ್ಚಿಲ್, ಅನಂತ್ ಬರ್ವೆ, ಶ್ಯಾಮಲ ಎಚ್. ಉದ್ಯಾವರ್, ಕವಿತಾ ದಾಮೊದರನ್, ಅರವಿಂದ ಮೆಂಡನ್, ಶರತ್ ಉಚ್ಚಿಲ್, ಸದಾಶಿವ ಮೂಲ್ಯ, ವಸಂತಕುಮಾರ್ ಆರ್ ಉಚ್ಚಿಲ್, ಹರಿಶ್ಚಂದ್ರ ಉದ್ಯಾವರ್, ಬೀರಪ್ಪ ಕೆ. ಕುಂಬ್ಳೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸಚ್ಚಿದಾನಂದ ಎ. ಐಲ್ ಅವರು ಎಲ್ಲರಿಗೂ ಅಭಾರ ಮನ್ನಿಸಿದ್ದು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸೊಸೈಟಿಗೆ ಹೊಸ ಸದಸ್ಯರುಗಳನ್ನು ಸೇರಿಸಬೇಕೆಂದು ವಿನಂತಿಸಿದರು.

ವರದಿ : ಈಶ್ವರ ಎಂ. ಐಲ್

ಚಿತ್ರ : ಸುಭಾಷ್ ಶಿರಿಯ

By suddi9

Leave a Reply

Your email address will not be published. Required fields are marked *