ಬಂಟ್ವಾಳ: ರಾಜಕೀಯ ಕ್ಷೇತ್ರದ ಮೂಲಕ ನಡೆಸಿರುವ ಸಮಾಜ ಸೇವಾ ಚಟುವಟಿಕೆಗಾಗಿ ಐಎನ್ಬಿಸಿ ಡಬ್ಲ್ಯು ಎಫ್ ರಾ ಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ರಾಜ್ಯ ಕೆಪಿಸಿಸಿ ಕಾರ್ಮಿಕ ಘಟಕ ಉಪಾಧ್ಯಕ್ಷ ಕೆ.ಎಸ್.ಅಮೀರ್ ಅಹ್ಮದ್ ತುಂಬೆ ಯವರಿಗೆ ಅಮೇರಿಕಾ ಸಂಯುಕ್ತ ಸಂಸ್ಥಾನದ ಅಡಲ್ಟ್ ಆ್ಯಂಡ್ ಕಂಟಿನ್ಯು ಯಿಂಗ್ ಎಜುಕೇಶನ್ ಸಂಸ್ಥೆಯ ಮಾನ್ಯತೆ ಪಡೆದಿರುವ ಯುಎಸ್ಎ ಇಂಟರ್ ನ್ಯಾಷನಲ್ ತಮಿಳ್ ಯುನಿವರ್ಸಿಟಿ ಡಾಕ್ಟರೇಟ್ ಪದವಿ (ಡಾಕ್ಟರ್ ಆಫ್ ಲೆಟರ್ಸ್) ನೀಡಿ ಗೌರವಿಸಿದೆ. ತಮಿಳುನಾಡಿನ ಮದುರೈ ನಲ್ಲಿರುವ ಸಂಸ್ಥೆಯ ಶಾಖೆಯ ಕಛೇರಿಯಲ್ಲಿ ಪದವಿ ಪ್ರಧಾನ ಮಾಡಲಾಯಿತು.

