ವಿಟ್ಲ ಬಂಟರ ಸಂಘ ಗ್ರಾಮ ಸಮಿತಿ ವತಿಯಿಂದ `ಇಟ್ಟೆಲ್ದ ಬಂಟೆರೆನ ಆಟಿದ ಗಮ್ಮತ್’ ಎಂಬ ಕಾರ್ಯಕ್ರಮವು ವಿಟ್ಲದ ಮಾದರಿ ಶಾಲೆಯ ಶತಮಾನೋತ್ತರ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕೂಡೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದಿನೇಶ್ ಶೆಟ್ಟಿ ಅಳಿಕೆ ಮತ್ತು ವಿಜಯ ಶೆಟ್ಟಿ ಸಾಲೆತ್ತೂರು ಇವರು ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಮಹಿಳಾ ಘಟಕದ ಅಧ್ಯಕ್ಷೆ ಡಾ| ವಿದ್ಯಾ ಟಿ ರೈ ಸೌಅಗತಿಸಿದರು. ಸಂಘದ ಅಧ್ಯಕ್ಷ ವಸಂತ ಶೆಟ್ಟಿ ವಂದಿಸಿದರು. ಡಾ| ಕೆದಂಬಾಡಿ ತಿಮ್ಮಪ್ಪ ರೈ ವಿಟ್ಲ ಮತ್ತು ಶಿಕ್ಷಕಿ ಲತಾ ಸಿ ರೈ ಕೊಲ್ಯ ನಿರೂಪಿಸಿದರು. ಸಂಘದ ಗೌರವಾಧ್ಯಕ್ಷ ಡಾ| ರಮಾನಂದ ಶೆಟ್ಟಿ ಕೂಡೂರು, ವಲಯ ಅಧ್ಯಕ್ಷ ಭಾಸ್ಕರ ಶೆಟ್ಟಿ ವಿಟ್ಲ, ಪಟ್ಟಣ ಪಂಚಾಯತ್ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ ವಿಟ್ಲ, ಸೀತಾರಾಮ ಶೆಟ್ಟಿ ಒಕ್ಕೆತ್ತೂರು, ಗ್ರಾ ಪಂ ಮಾಜಿ ಅಧ್ಯಕ್ಷರು ಭವಾನಿ ಶೆಟ್ಟಿ ಕೊಲ್ಯ ಹಾಗೂ ಇತರರು ಉಪಸ್ಥಿತರಿದ್ದರು.