ವಿಟ್ಲ : ಮಾದರಿ ಶಾಲೆಯಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಟ್ಲ ಪಟ್ಟಣ ಪಂಚಾಯತ್‍ನ ಅಧ್ಯಕ್ಷರಾದ ಶ್ರೀ ಅರುಣ್ ವಿಟ್ಲ ಅವರು ಆಧುನಿಕ ಭರಾಟೆಯಲ್ಲಿ ಮುಂದುವರಿಯುತ್ತಿರುವ ಯುವ ಪೀಳಿಗೆಯಲ್ಲಿ ಪುರಾತನ ಸಂಸ್ಕೃತಿ ದಾರಿದೀಪವಾಲಿ, ಹಾಗೂ ಇದಕ್ಕೆ ಇಂದಿನ ಆಟಿಡೊಂಜಿ ಕೂಟ ಕಾರ್ಯಕ್ರಮ ಪೂರಕ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲ ಸಭಾಧ್ಯಕ್ಷರಾದ ಸುರೇಶ್ ಕುಮಾರ್ ವದ್ವ , ಮುಖ್ಯ ಅತಿಥಿಗಳಾದ ವಿಟ್ಲ ಪ.ಪಂ. ಕೌನ್ಸಿಲರ್ ಜಯಂತ್ , ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀ ನಾರಾಯಣ ಗೌಡ, ಸಿ.ಆರ್.ಪಿ ಶ್ರೀ ಶಿವರಾಮ ಭಟ್, ನಿವೃತ್ತ ಮುಖ್ಯೋಪಾಧ್ಯಯರಾದ ವಿಶ್ವನಾಥ ಹೆಚ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಟೇಶ್ ವಿಟ್ಲ, ಆರ್ ಕೆ ಆಟ್ರ್ಸ್ ನ ಶ್ರೀ ಕೃಷ್ಣಯ್ಯ ಬಲ್ಲಾಳ್ , ಉದ್ಯಮಿ ದಿನಕರ್ ಭಟ್ ಮಾವೆ, ಕುಂಬ್ರ ಸಿ.ಆರ್.ಪಿ ಮತ್ತು ಪಾಕ ತಜ್ಞ ಶ್ರೀ ಜಯರಾಮ ಭಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀಮತಿ ಜಯಂತಿ ನಾರಾಯಣ ಮೂಲ್ಯ ಇವರು ಪಾಡ್ದನ ಹಾಡಿದರು. ಜಯರಾಮ ಭಟ್ ಆಟಿದ ವಿಶೇಷ ತಿನಿಸುಗಳ ಪರಿಚಯ ಮಾಡಿಕೊಟ್ಟರು. ನಂತರ ಈ ಪ್ರಯುಕ್ತ ಆಯೋಜಿಸಲಾದ ಆಟೋಟ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಮುಖ್ಯೋಪಾಧ್ಯಾಯರಾದ ಮೋಹನ್ ರಾಜ್ ಸ್ವಾಗತಿಸಿದರು. ಸಹಶಿಕ್ಷಕಿ ಸುಜಾತ ಕೆ ರೈ ಇವರು ಧನ್ಯವಾದವಿತ್ತರು. ಸಹ ಶಿಕ್ಷಕರಾದ ವಿಶ್ವನಾಥ ಗೌಡ ಕಾರ್ಯಕ್ರಮ ನಿರ್ವಹಿಸಿದರು.