ಮುಂಬಯಿ, ಆ.08: ಮುಂಬಯಿ ಮಹಾನಗರದಲ್ಲಿ ಸಾಮಾಜಿಕ ಕಳಕಳಿಯನ್ನಿರಿಸಿ, ಕಲಾವಿದರ ಶ್ರಮಿಸಿ ಹೆಸರಾಂತ ಕೊಂಕಣಿ ನಾಟಕ ರಚನೆಕಾರ, ರಂಗಪ್ರವೀಣ ಹೆನ್ರಿ ಡಿ’ಸಿಲ್ವಾ ಸುರತ್ಕಲ್ (ಮುಂಬಯಿ) ಅವರಿಂದ ಸ್ಥಾಪಿಸಲ್ಪಟ್ಟ ಕೆನಾರಾಯ್ಟ್ಸ್ ಯೂತ್ ಅಸೊಸಿಯೇಶನ್ ಮುಂಬಯಿ ಇದೀಗ
ಚಲನಚಿತ್ರ ರಂಗದಲ್ಲಿ ಛಾಪು ಮೂಡಿಸಿದ್ದು, ಡಿ’ಸಿಲ್ವಾ ಅವರ ಚಿತ್ರಕಥೆ, ನಿರ್ಮಾಪಕತ್ವದಲ್ಲಿ ಕೆನಾರಾಯ್ಟ್ಸ್ ಯೂತ್ ಅಸೊಸಿಯೇಶನ್ ಮುಂಬಯಿ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ (ಕ್ಯಾಮ್) ಬ್ಯಾನರ್ನಲ್ಲಿ ನಿರ್ಮಿತ ಹೊಚ್ಚ ಹೊಸ ಕೊಂಕಣಿ ಚಲನಚಿತ್ರ `ನಶೀಬಾಚೊ ಖೇಳ್’ ಇದೇ ಆ.12ರಂದು ತೆರೆ ಕಾಣಲಿದೆ.

ಆ.12ರ ಶುಕ್ರವಾರ ಬೆಳಿಗ್ಗೆ 9.15 ಗಂಟೆಗೆ ಮಂಗಳೂರು ಅಲ್ಲಿನ ಪ್ರಭಾತ್ ಟಾಕೀಸ್ನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅ| ವಂ| ಡಾ| ಅಲೋಸಿಯಸ್ ಪೌಲ್ ಡಿ’ಸೋಜಾ ಆಶೀರ್ವಚನಗೈದು ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಬಿಡುಗಡೆ ಗೊಳಿಸಲಿದ್ದಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್ ಲೋಬೊ, ಕರ್ನಾಟಕ ರಾಜ್ಯ ವಿಧಾನ ಪರಿಷತ್ತ್ನ ಮುಖ್ಯ ಸಚೇತಕ ಐವಾನ್ ಡಿ’ಸೋಜಾ, ಗೌರವ ಅತಿಥಿಯಾಗಿ ಚಲನಚಿತ್ರ ಪುರಸ್ಕೃತ ನಿರ್ದೇಶಕ ರಿಚ್ಚಾರ್ಡ್ ಕಾಸ್ತೆಲಿನೋ, ದಾಯ್ಜಿವಲ್ರ್ಡ್ ಸಮೂಹದ ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ ಆಗಮಿಸಲಿದ್ದಾರೆ.
ಆ.19ರ ಶುಕ್ರವಾರ ಬೆಳಿಗ್ಗೆ 9.15 ಗಂಟೆಗೆ ಉಡುಪಿ ಕಲ್ಯಾಣ್ಪುರ ಅಲ್ಲಿನ ಆಶೀರ್ವಾದ್ ಟಾಕೀಸ್ನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅ| ವಂ| ಡಾ| ಜೆರಾಲ್ಡ್ ಐಸಾಕ್ ಲೋಬೊ ಆಶೀರ್ವಚನಗೈದು ಉಡುಪಿ ಜಿಲ್ಲೆಯ ಜನತೆಗೆ ಬಿಡುಗಡೆ ಗೊಳಿಸಲಿದ್ದಾರೆ. ಗೌರವ ಅತಿಥಿಯಾಗಿ ಉದ್ಯಮಿ ಲ್ಯಾನ್ಸಿ ಡಿ’ಸೋಜಾ ಆಗಮಿಸಲಿದ್ದಾರೆ.
ಕಳೆದ ನವೆಂಬರ್ನಲ್ಲಿ ಮುಹೂರ್ತಗೊಂಡು ಸೆಟ್ಟೇರಿದ ಈ ನೂತನ ಕೊಂಕಣಿ ಚಿತ್ರವನ್ನು ಮರಾಠಿ, ಬೋಜ್ಪುರಿ, ಬಾಲಿವುಡ್ ಚಿತ್ರಗಳನ್ನು ನಿರ್ಮಿಸಿದ ಮುಂಬಯಿ ಉದ್ಯಮಿ ಹೆರಾಲ್ಡ್ (ಹ್ಯಾರಿ) ಫೆರ್ನಾಂಡಿಸ್ ನಿರ್ದೇಶಿಸಿದ್ದು, ಬಹುಮುಖ ಯುವ ಪ್ರತಿಭೆ ಎಲ್ಟೆನ್ ಮಸ್ಕರ್ಹೇನಸ್ ನಾಯಕ ನಟನಾಗಿ ಮತ್ತು ಹೆಸರಾಂತ ಗಾಯಕಿ ಎಸ್ಟ್ರ್ ನೊರೋನ್ಹಾ ನಾಯಕಿ ಪಾತ್ರವನ್ನು ನಿಭಾಯಿಸಿದ್ದಾರೆ. ತಾರಾಗಣದಲ್ಲಿ ತಾರಾಗಣದಲ್ಲಿ ಪ್ರಿನ್ಸ್ ಜಾಕೋಬ್ (ಗೋವಾ) ರಂಜಿತಾ ಲೂವಿಸ್, ಕ್ಲೆನ್ವಿನ್ ಫೆರ್ನಾಂಡಿಸ್, ಸುಜತಾ ಅಂದ್ರಾದೆ, ಸ್ಟೇನಿ ಅಲ್ವಾರೆಸ್ ಮತ್ತು ಆಲ್ವಿನ್ ಅಂದ್ರಾದೆ,ಅರುಣ್ರಾಜ್ ಪ್ರಧಾನವಾಗಿ ಅಭಿನಯಿಸಿ ಚಿತ್ರಪ್ರದರ್ಶನದ ಕಾತರದಲ್ಲಿದ್ದಾರೆ.
ಹೆಸರಾಂತ ನಟ-ನಟಿಯರು ಹಾಗೂ ನಿರ್ದೇಶಕರ ತಂಡದೊಂದಿಗೆ ಈ ಸದಭಿರುಚಿಯ, ಅದ್ದೂರಿ ಕೊಂಕಣಿ ಚಿತ್ರ ನಿರ್ಮಿಸಿದ್ದು, ಸರ್ವರೂ ಪರಿವಾರ ಸಮೇತ ವೀಕ್ಷಿಸಬಹುದಾದ ಚಿತ್ರ ಇದಾಗಿದೆ ಗ್ರಾಮೀಣ ಬದುಕಿನ ಕಷ್ಟ ಸುಖಗಳೊಂದಿಗೆ ಪ್ರೀತಿ, ಪ್ರಣಯ, ನಿಗೂಢತೆಯೊಂದಿಗೆ ಕತೆಯಾಗಿ ನಿರ್ಮಿತ ಈ ಚಿತ್ರ ಬಾರ್ಕೂರು, ಸಾಸ್ತಾನ ಮುಂತಾದ ಕರಾವಳಿಯ ಪ್ರದೇಶ ಹಾಗೂ ಮುಂಬಯಿ ನಗರದ ಫಿಲ್ಮ್ಸಿಟಿ, ಭಜನ್ಲಾಲ್ ಸ್ಟೂಡಿಯೋ ನಾಯ್ಗಾಂವ್, ಅಂಧೇರಿ ಪೂರ್ವದ ಪಲೋಟ್ಟಿ ಚರ್ಚ್, ಎಂ.ಕೆ ಶಾಹ ಜುವೆಲ್ಲರ್ಸ್ ಚಿರಾ ಬಜ್ಹಾರ್, ಅಂಧೇರಿ ಪೂರ್ವದ ಜೆ.ಬಿ ನಗರದಲ್ಲಿನ ಸ್ಕೈಲಿಂಕ್ ಕಛೇರಿ, ನಂದವನ್ ಸ್ಟೂಡಿಯೋ, ಮಡ್ಐಲ್ಯಾಂಡ್ ಜಾಗಗಳಲ್ಲಿ ಚಿತ್ರೀಕರಣ ಗೊಳಿಸಲಾಗಿದೆ. ಕೊಂಕಣಿ ಚಿತ್ರರಂಗದ ಕೊರಗನ್ನು ದೂರ ಮಾಡುವ ಸಲುವಾಗಿ ಹೆಸರಾಂತ ಕೊಂಕಣಿ ಭಾಷಾ ನಟ ನಟಿಯರು ಹಾಗೂ ನಿರ್ದೇಶಕರ ತಂಡದೊಂದಿಗೆ ವಿಕ್ಟರ್ ಕೊನ್ಸೆಸೋ ಅವರ ಸಂಗೀತ ಸಂಯೋಜನೆ, ವಿಲ್ಸನ್ ಒಲಿವೆರಾ ಅವರ ಸಂಗೀತದೊಂದಿಗೆ ಈ ಚಿತ್ರ ಚಿತ್ರೀಕರಿಸಿದ್ದು, ಇದೇ ಆ.12ರಂದು ಬಿಡುಗಡೆ ಗೊಳಿಸಲಾಗುವುದು ಎಂದು ನಿರ್ಮಾಪಕ ಹೆನ್ರಿ ಡಿ’ಸಿಲ್ವಾ ಸುರತ್ಕಲ್ ತಿಳಿಸಿದ್ದಾರೆ.
ಮುಂಬಯಿಯಲ್ಲಿ 1975ರಲ್ಲಿ ಕೆನಾರಾಯ್ಟ್ಸ್ ಸಂಸ್ಥೆಯನ್ನು ರೂಪಿಸಿ ಆ ಮೂಲಕ `ಕಾಜ್ಹಾರ ಉಪ್ರಾಂತ್’ ಕೊಂಕಣಿಯ ಇತಿಹಾಸದಲ್ಲೇ ಪ್ರಪ್ರಥಮ ವಿಡಿಯೋ ಫಿಲ್ಮ್ ನಿರ್ಮಿಸಿದ ಕೀರ್ತಿಯನ್ನೊತ್ತ ಹೆನ್ರಿ ಡಿ’ಸಿಲ್ವಾ ಸುರತ್ಕಲ್ ಅವರು ಎಂಟು ವಿವಿಧ ಸ್ವರಚಿತ ನಾಟಕಗಳನ್ನು ನಿರ್ಮಿಸಿ ರಾಷ್ಟ್ರದಾದ್ಯಂತ ನೂರಾರು ಪ್ರದರ್ಶನಗಳನ್ನೀರುವರು. ತನ್ನ ಸಾರಥ್ಯದಲ್ಲಿ ಸಂಗೀತ ಯುಗದ ಗಾನಸುಧೆ (ಪ್ರಸ್ತುತ ಸ್ವರ್ಗಸ್ಥ) ಕೊಂಕಣ್ ಕೊಗುಳ್ ವಿಲ್ಫಿ ರೆಬಿಂಬಸ್ ಅವರ `ವಿಲ್ಫಿ ರೆಬಿಂಬಸ್ ಕೊಂಕಣಿ ನೈಟ್’ ಸಂಗೀತ ರಸಮಂಜರಿ ಕಾರ್ಯಕ್ರಮಗಳ ಯಶಸ್ವೀ 150ಕ್ಕೂ ಪ್ರದರ್ಶನಗಳನ್ನು ಕಲಾಭಿಮಾನಿಗಳಿಗೆ ಅವಕಾಶ ಕಲ್ಪಿಸಿರುವರು. ಡಿ’ಸಿಲ್ವಾರ ನಿರ್ಮಾಪಕತ್ವದಲ್ಲಿ ಮೂದಿಬಂದ `ನಶೀಬಾಚೊ ಖೇಳ್’ ಕೊಂಕಣಿ ಚಲನಚಿತ್ರವನ್ನು ವೀಕ್ಷಿಸುವಂತೆ ಸಂಘಟಕರು ವಿನಂತಿಸಿದ್ದಾರೆ.







