ಬಂಟ್ವಾಳ:ಸಾಮಾಜಿಕ ಸುಧಾರಣೆಯ ಹರಿಕಾರಿ ಮಾಜಿ ಮುಖ್ಯಮಂತ್ರಿ ದಿ| ದೇವರಾಜ ಅರಸುರವರ ಜನ್ಮ ಶತಮಾನೋತ್ಸವದ ಅಂಗವಾಗಿ ಅವರ ಸಾಧನೆಯನ್ನು ಬಿಂಬಿಸುವ ರಥ ಬುಧವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಬಿ.ಸಿ.ರೋಡಿಗೆ ಆಗಮಿಸಿದ್ದು ತಾಲೂಕು ಪಂಚಾಯತ್ ವಠಾರದಲ್ಲಿ ಸ್ವಾಗತಿಸಲಾಯಿತು. ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್‍ಅಲಿ, ದೇವರಾಜ ಅರಸುರವರ ಪ್ರತಿಮೆಗೆ ಹೂ ಹಾರ ಹಾಕಿ ಗೌರವಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯರಾದ ಎಂ.ಎಸ್. ಮಹಮ್ಮದ್, ರವೀಂದ್ರ ಕಂಬಳಿ, ತಾ.ಪಂ.ಸದಸ್ಯರು, ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂಡ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಜಯಣ್ಣರವರು ಇದ್ದರು. ಮಧ್ಯಾಹ್ನದ ಬಳಿಕ ರಥ ಇಲ್ಲಿಂದ ಪುತ್ತೂರಿನತ್ತ ತೆರಳಿತು.