ಮೂಡುಬಿದಿರೆ: ರೋಟರ್ಯಾಕ್ಟ್ ಕ್ಲಬ್ ಮೂಡುಬಿದಿರೆ ಇದರ `ಶುಭಾರಂ’ 2016-17ನೇ ಸಾಲಿನ ಪದಗ್ರಹಣ ಸಮಾರಂಭ ಆಗಸ್ಟ್ 14ರಂದು ರೋಟರಿ ಸಮ್ಮಿಲನ್ ಸಭಾಭವನದಲ್ಲಿ ನಡೆಯಲಿದೆ. ಮೂಡುಬಿದಿರೆ ರೋಟರಿ ಕ್ಲಬ್‍ನ ಅಧ್ಯಕ್ಷ ಮಹಮ್ಮದ್ ಶರೀಫ್ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಲಿದ್ದು, ಉದ್ಯಮಿ ಮಹಮ್ಮದ್ ಆಲಿ ಅಬ್ಬಾಸ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ನಿಕಟಪೂರ್ವ ಅಧ್ಯಕ್ಷ ಮಹಮ್ಮದ್ ಆರೀಶ್ ಹಾಗೂ ನೂತನ ಅಧ್ಯಕ್ಷ ಅಮರ ಕೋಟೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.