ಮಂಗಳೂರಿನ ವಾಮಂಜೂರಿನಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊರ್ವನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಘಟನೆ ವಾಮಂಜೂರು ಪೆಟ್ರೋಲ್ ಪಂಪ್ ಬಳಿ ನಡೆಯಿತು.
ಮೂಡುಶೆಡ್ಡೆ ನಿವಾಸಿ ರೌಡಿಶೀಟರ್ ಶರಣ್ ತನ್ನ ಪತ್ನಿಯೊಂದಿಗೆ ಆಟೋ ರಿಕ್ಷಾದಲ್ಲಿ ಮಂಗಳೂರಿಗೆ ತೆರಳುತಿದ್ದ ಸಂದರ್ಭದಲ್ಲಿ ವಾಮಂಜೂರು ಪೆಟ್ರೋಲ್ ಪಂಪ್ ಬಳಿ ರಿಕ್ಷಾವನ್ನು ತಡೆದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ.

IMG-20160819-WA0014ಗಂಬೀರ ಗಾಯಗೊಂಡ ಶರಣ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನು ವಾಮಂಜೂರು ರೋಹಿ ಕೊಲೆಯ ಪ್ರಮುಖ ಅರೋಪಿಯಾಗಿದ್ದ.
ಸ್ಥಳಕ್ಕೆ ಆಗಮಿಸಿದ ಮಂಗಳೂರು ಠಾಣಾ ಪೋಲಿಸರು ಅರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

By suddi9

Leave a Reply

Your email address will not be published. Required fields are marked *