ಬಂಟ್ವಾಳ: ತುಂಬೆ ಮತ್ತು ಬಂಟ್ವಾಳ ಮೂಡ ಕ್ಷಸ್ಟರ್ ಶಾಲೆಗಳ ಕಬಡ್ಡಿ ಪಂದ್ಯಾಟ ಸ.ಹಿ.ಪ್ರಾ.ಶಾಲೆ ಬ್ರಹ್ಮರಕೂಟ್ಲುವಿನಲ್ಲಿ ನಡೆಯಿತು. ವಿಜೇತ ತಂಡಗಳಿಗೆ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಎಸ್ಡಿಎಮ್ಸಿ ಅಧ್ಯಕ್ಷ ಮಾಧವ ವಳವೂರು, ಗ್ರಾ.ಪಂ.ಸದಸ್ಯ ಮಧುಸೂಧನ ಶೆಣೈ , ಬ್ರಹ್ಮರಕೂಟ್ಲು ಮು.ಶಿಕ್ಷಕಿ ಫ್ಲೋರಿನ್ ರೆಬೆಲ್ಲೊ, ಶಾಲಾ ಎಸ್ಡಿಎಂಸಿ ಸದಸ್ಯ ಚಂದ್ರಹಾಸ ಕರ್ಕೇರ, ಸ.ಶಿಕ್ಷಕಿ ಭಾರತಿ, ನಿವೃತ್ತ ಮುಖ್ಯ ಶಿಕ್ಷಕ ಬಾಬು ಮಾಸ್ತರ್, ಸೇಸಪ್ಪ ಮಾಸ್ತರ್, ದೈಹಿಕ ಶಿಕ್ಷಕಿಯರಾದ ದೇವಿ, ವೇದಾವತಿ, ಮಂಜುಳ, ಪ್ಲೇವಿ ಫೆರ್ನಾಂಡಿಸ್, ಡಯಾನ ಉಪಸ್ಥಿತರಿದ್ದರು.
