ವಾಮಂಜೂರು:ಮನುಷ್ಯನ ಬದುಕಿನಲ್ಲಿಎಷ್ಟೇ ಒತ್ತಡಗಳು ಇದ್ದರೂ ಶಿಕ್ಷಣವು ಅವನನ್ನು ಸೃಜನಾತ್ಮಕವಾಗಿ ಬೆಳೆಸುವಲ್ಲಿ ಸಹಕಾರಿಯಾಗಿದೆ. ವಿದ್ಯಾರ್ಥಿಗಳ ಜೀವನ ಪಥವನ್ನು ಮುನ್ನಡೆಸಲು ಶಿಕ್ಷಕರ ಮಾರ್ಗದರ್ಶನ, ಪೋಷಕರರಕ್ಷಣೆಅಗತ್ಯ. ಮಕ್ಕಳು ಜೀವನದಲ್ಲಿಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು. ಮುಂದಿನ ದಿನದಲ್ಲಿಉತ್ತಮಉದ್ಯೋಗವನ್ನು ಪಡೆದುಅಸಕ್ತರಿಗೆನೆರಳನ್ನು ಕೊಡುವಂತಹ ವ್ಯಕ್ತಿಗಳಾಗ ಬೇಕೆಂದು ದ.ಕ.ಜಿಲ್ಲಾ ಪಂಚಾಯತ್‍ಉಪಾಧ್ಯಕ್ಷರಾದ  ಕಸ್ತೂರಿ ಪಂಜ ಹೇಳಿದರು.  ಅವರು  ಆ 29 ರಂದು ಎಸ್.ಡಿ.ಎಂ.ನ ಐ.ಟಿ.ಐ ಸಭಾಂಗಣದಲ್ಲಿ   ದೀಪ ಬೆಳಗಿಸಿ ಉದ್ಘಾಟಿಸಿದರು . ನಂತರ   ಮಂಗಳಜ್ಯೋತಿ ಸಮಗ್ರ ಶಾಲೆ ಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್ ಸಂಸ್ಥೆಯು ಪೋಷಕತ್ವವನ್ನು ಹೊಂದಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪುಸ್ತಕ ಮತ್ತು ಬ್ಯಾಗ್ ವಿತರಿಸಿ ಮಾತನಾಡಿದರು.

???????????????????????????????

???????????????????????????????

3 (1)

ಮಂಗಳಜ್ಯೊತಿ ಸಮಗ್ರ ಶಾಲೆಯಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್‍ಯು. ಎಸ್. ಎ. ಇದರ ಯೋಜನಾಧಿಕಾರಿ ಪುನೀತ್ ಶೆಟ್ಟಿ ಈ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯುಒಟ್ಟು94ಫಲಾನುಭವಿಗಳಿಗೆ ವಿದ್ಯಾರ್ಥಿ ವೇತನ, ಪುಸ್ತಕ ಮತ್ತು ಬ್ಯಾಗ್‍ವಿತರಿಸಲಾಗುವುದುಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಪುಸ್ತಕ ಮತ್ತು ಬ್ಯಾಗ ವಿತರಣೆ ಮಾಡಿದಎಮ್. ಪಿ. ಜ್ಞಾನೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಂಗಳೂರು ದಕ್ಷಿಣ ವಲಯಇವರು ಮಾತನಾಡುತ್ತಾ ನಮಗೆ ಸಿಕ್ಕಿದ ವಸ್ತುವಿನ ಮೇಲೆ ಪ್ರೀತಿಇರಬೇಕು. ಸಮಾಜದಲ್ಲಿ ನಮ್ಮನ್ನುಗುರುತಿಸುವಂತಹ ಕೆಲಸ ಮಾಡಬೇಕು. ಜೀವನದಲ್ಲಿಗುರಿಇರಬೇಕು, ಸ್ಫೂರ್ತಿಇರಬೇಕು, ಸಾಧಿಸುವ ಪ್ರೇರಣೆ ನಮ್ಮಲ್ಲಿರಬೇಕೆಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರೋ. ಎ. ರಾಜೇಂದ್ರ ಶೆಟ್ಟಿಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು   ಸರ್ವತೋಮುಖಅಭಿವೃದ್ಧಿಯಾಗದಿದ್ದರೆ, ಸಾಮೂಹಿಕ ಹಿತವಾಗುವುದಿಲ್ಲ, ಸಾಮೂಹಿಕ ಹಿತಇಲ್ಲದಿದ್ದರೆಎಲ್ಲವೂ ಸರಿಯಾದದಾರಿಯಲ್ಲಿ ಸಾಗುವುದಿಲ್ಲ, ಪ್ರಜಾಪ್ರಭುತ್ವ ಸರಿಯಾಗಿ ನಡೆಯಬೇಕಾದರೆ ವೈಯಕ್ತಿಕ ಹಿತದೊಂದಿಗೆ ಸಾಮೂಹಿಕ ಹಿತಚಿಂತನೆ ಬೆಳೆಯಬೇಕು. ಸಾರ್ಥಕತೆಇದ್ದರೆ ಬದುಕಿನಲ್ಲಿ ಸಾಧನೆ ಮಾಡಬಹುದು. ಶ್ರೇಷ್ಠ ಸಾಧನೆ ಮಾಡಿ ಒಳ್ಳೆಯ ಮನುಷ್ಯರಂತೆಎಲ್ಲರನ್ನು ಪ್ರೀತಿಸಿ ಸಾರ್ಥಕತೆಯಜೀವನ ನಿಮ್ಮದಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮಂಗಳ ಜ್ಯೋತಿ ಸಮಗ್ರ ಶಾಲೆಯ ಆಡಳಿತಾಧಿಕಾರಿ   ಗಣೇಶ್ ಭಟ್, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ  ಅಶೋಕ್‍ಕುಮಾರ್ ಪಿ., ಎಸ್.ಡಿ.ಎಂ ಐ. ಟಿ.ಐ.ನ ಪ್ರಾಂಶುಪಾಲರಾದ ಶ್ರೀ ನರೇಂದ್ರಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಂಗಳ ಜ್ಯೋತಿ ಸಮಗ್ರ ಶಾಲೆ, ಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್‍ಯು. ಎಸ್. ಎ. ಇದರಯೋಜನಾಧಿಕಾರಿ ಪುನೀತ್ ಶೆಟ್ಟಿ ಸ್ವಾಗತಿಸಿ,  ರಮ್ಯಕಾರ್ಯಕ್ರಮ ನಿರೂಪಿಸಿದರು, ಹರೀಶ್ ಕುಲಶೇಖರ್ ವಂದಿಸಿದರು.

By suddi9

Leave a Reply

Your email address will not be published. Required fields are marked *