ಬಂಟ್ವಾಳ: ಇಲ್ಲಿನ ಕಾರಾಜೆಯ ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ ಇತ್ತೀಚೆಗೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಜಿ.ಪಂ.ಸದಸ್ಯೆ ಮಮತಾ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಜೀಪ ಮೂಡ ಗ್ರಾ.ಪಂ.ಸದಸ್ಯ ಸುರೇಶ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ಶಿಕ್ಷಣ ಸಂಯೋಜಕರಾದ ರಮಾನಂದ, ದೇವದಾಸ್, ಸುಜಾತ ಕುಮಾರಿ, ಎಸ್ಡಿಎಂಸಿ ಅಧ್ಯಕ್ಷ ಸಾಯಿಬು, ಹಿರಿಯ ಪೋಷಕ ನಾರಾಯಣ ಪೂಜಾರಿ, ಸ್ಥಳೀಯರಾದ ಅಜೀಜ್, ಶಾಲಾ ಮುಖ್ಯೋಪಾಧ್ಯಾಯ ಗೋಪಾಲ ಕೆ. ಸಹಶಿಕ್ಷಕಿಯರಾದ ಸುಜಾತ ಎಂ, ಮೀನಾದೇವಿ ಆರ್.ಕೆ. ಗ್ರೇಸಿಪಿಂಟೋ, ಜಯಮ್ಮ ಎ.ಎನ್. ಗೌರವ ಶಿಕ್ಷಕಿ ಮಮತಾ ಮತ್ತಿತರರು ಪಾಲ್ಗೊಂಡಿದ್ದರು.
ಜಿ.ಪಂ.ಸದಸ್ಯೆ ಮಮತಾಗಟ್ಟಿ ತೆಂಗಿನಗಿಡ ನೀಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು. 