ಬಂಟ್ವಾಳ : ಮರಗಳೆಂದರೆ ದಿಮ್ಮಿಗಳಲ್ಲ. ಜೀವ ನೀಡುವ ಜೀವ. ಪಾಶ್ಚಾತ್ಯರ ಅನುಕರಣೆ ಮೂಲಕಮರಗಳನ್ನು ದಿಮ್ಮಿಗಳಾಗಿ ಮಾತ್ರ ನೋಡಲಾಗುತ್ತಿದೆ. ಸಸಿನೆಟ್ಟು ಪ್ರಕೃತಿ ಆರಾಧನೆ ಮಾಡುವುದರ ಜೊತೆಗೆ ಸದ್ಯ ಇರುವ ಬನಗಳನ್ನು ಉಳಿಸುತ್ತಾ ಅರಣ್ಯ ಪೂಜೆ ಮಾಡುವ ಮೂಲಕ ಮರಳಿ ಭಾರತೀಯತೆಗೆ ಮರಳಬೇಕಾಗಿದೆ. ಪ್ರತಿ ಮರ ಭೂದೇವಿಯ ರೋಮವಿದ್ದಂತೆ, ನದಿಗಳು ರಕ್ತನಾಡಿಗಳಿದ್ದಂತೆ ಅದರ ಕಟಾವು ಅಥವಾ ತಿರುವು ಪ್ರಕೃತಿಯ ವಿರುದ್ಧ ಕ್ರಿಯೆ. ಇದರಿಂದ ಅಡ್ಡ ಪರಿಣಾಮ ಬೀರುವುದು ಖಚಿತ. ಸದ್ಯ ನಮಗೆ ಎಷ್ಟು ಸಾಧ್ಯವೋ ಅಷ್ಟು ಸಸಿಗಳನ್ನು ಬೆಳೆಸಿದರೆ ಅದೇ ಸಸ್ಯನಾರಾಯಣನ ಪೂಜೆ ಎಂದು ಶ್ರೀ ದುರ್ಗಾಪರಮೇಶ್ವರೀ ಸೇವಾ ಟ್ರಸ್ಟ್ ರಿ. ಜ್ಯೋತಿಗುಡ್ಡೆ ಇಲ್ಲಿಯ ಟ್ರಸ್ಟಿಟಿ ತಾರಾನಾಥ ಕೊಟ್ಟಾರಿಯವರು ಅಭಿಪ್ರಾಯ ಪಟ್ಟರು.IMG-20160903-WA0007

IMG-20160903-WA0003

IMG-20160903-WA0004

IMG-20160903-WA0005

IMG-20160903-WA0006

 ಸಿಂಹ ಸಂಕ್ರಮಣದ ಪ್ರಯುಕ್ತ  ಆ.16 ರಂದು ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಸತ್ಯ ನಾರಾಯಣ ಪೂಜೆಯ ಜೊತೆಗೆ ಔಷಧೀಸಸ್ಯಗಳ ವಿತರಣೆಯ ಸಸ್ಯನಾರಾಯಣ ಕಾರ್ಯಕ್ರಮವು  ನೆರವೇರಿತು. ಜ್ಯೋತಿಗುಡ್ಡೆ ಶ್ರೀ ದುಗಾಱಪರಮೇಶ್ವರೀ  ದೇವಸ್ಥಾನದ ನವರಾತ್ರಿ ಉತ್ಸವದ ಾಮಂತ್ರಣ ಪತ್ರಿಕೆಯನ್ನು  ಕೂಡ ಈ ಸಂದಭಱದಲ್ಲಿ ಬಿಡುಗಡೆಗೊಳಿಸಲಾಯಿತು. ಸುಮಾರು 140 ಸಸಿ ವಿತರಣೆ ಮಾಡಲಾಯಿತು.ಈ ಸಂದಭಱದಲ್ಲಿ ಮಾಲತಿ ದಿನೇಶ್ ,ಕುಮಾರಿನೆಟ್ಟನ, ಕೇಶವನಯಾಯ, ದಿನೇಶ್ ಪೂಜಾರಿ  ಮತ್ತಿತರರು ಉಪಸ್ಥಿತರಿದ್ದರು. ಸೇವಾ ಸಮಿತಿ ಸಂಚಾಲಕ ನಾರಾಯಣ ನಾಯ್ಕ  ವಂದಿಸಿದರು.ಮಲ್ಲಿಕಾ ವೇಣುಗೋಪಾಲ್ ಸ್ವಾಗತಿಸಿಉದಯ ಕುಮಾರ್ ಜ್ಯೋತಿಗುಡ್ಡೆ  ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *