ಬಂಟ್ವಾಳ: ಸಾಮಾಜಿಕಜಾಲತಾಣದಲ್ಲಿ ಐತಿಹಾಸಿಕ ಹಿನ್ನಲೆ ಇರುವ ದಕ್ಷಿಣಕನ್ನಡ ಪವಿತ್ರಕ್ಷೇತ್ರ, ಕೋಟ್ಯಾಂತರ ಜನರ ಆರಾಧ್ಯದೇವತೆ ಕಟೀಲು ಶ್ರೀ ದುರ್ಗಾಪರಮೇಶ್ವರೀದೇವಿಯ ಬಗ್ಗೆ ಅವಹೇಳನ ಅಶ್ಲೀಲ ಪದಗಳಿಂದ ನಿಂದನೆ ಮಾಡಿರುವ ವ್ಯಕ್ತಿಗಳನ್ನು ತುಳುನಾಡಿನ ಕಾರಣೀಕ ಕ್ಷೇತ್ರವಾದ ಪನೋಲಿ ಬೈಲು ಶ್ರೀ ಕಲ್ಲುರ್ಟಿ ದೈವ ಶಿಕ್ಷೆ ನೀಡಲಿ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸಜೀಪ ವಲಯದ ವತಿಯಿಂದ ತ್ಷೇತ್ರದಲ್ಲಿ ದೈವದ ಮುಂದೆ ಹರಕೆ ಮಾಡಿಕೊಳ್ಳಲಾಯಿತು.1 (6) 3 (5)

ನಿರಂತರವಾಗಿ ಹಿಂದೂ ದೇವತೆಗಳ ನ್ನು ನಿಂದಿಸುವ ಕೆಲಸಗಳು ಅನ್ಯ ಸಮಾಜದ ವ್ಯಕ್ತಿಗಳಿಂದ ನಡೆಯುತ್ತಲೇ ಇದೆ. ಇದನ್ನು ಹಿಂದೂ ಸಮಾಜ ಖಂಡಿಸುತ್ತಲೇ ಬಂದಿದೆ, ಆದರೂ ಇಂತಹ ಸಮಾಜ ಘಾತುಕ ಶಕ್ತಿಗಳಿಗೆ ಇಲಾಖೆಯಿಂದ ಸರಿಯಾದ ಶಿಕ್ಷೆಗಾಗಿಲ್ಲ ಎನ್ನುವ ಕಾರಣಕ್ಕಾಗಿ ಅವರು ಪದೇ ಪದೇ ಇಂತಹ ಅವಹೇಳನಕಾರಿಯಾದ ಶಬ್ದಗಳಿಂದ ನಿಂದಿಸುವ ಕೆಲಸವನ್ನು ಮುಂದುವರಿಸುತ್ತಿದ್ದಾರೆ. ಅದಕ್ಕಾಗಿ ಹಿಂದೂ ಸಮಾಜದ ಶಾಂತರೀತಿಯಲ್ಲಿ ದೈವದ ಎದುರು ಹರಕೆ ಮಾಡಿಕೊಳ್ಳುತ್ತಿದೆ. ತುಳುನಾಡಿನಲ್ಲಿ ರಾಕ್ಷಕರನ್ನು ಸಂಹಾರ ಮಾಡಿದ ಅದೆಷ್ಟೋ ಕತೆಗಳು ಇವೆ. ಹಾಗಾಗಿ ಇವರನ್ನು ಕೂಡಾ ಇಲ್ಲಿನ ದೇವರು, ದೇವತೆಗಳು ಯಾವುದೇ ರೂಪದಲ್ಲಿ ಶಿಕ್ಷೆ ನೀಡುತ್ತಾರೆ, ಅ ಮೂಲಕ ಹಿಂದೂ ಸಮಾಜದ ಸಂಬಿಕೆಯನ್ನು ಉಳಿಸುತ್ತಾರೆ ಎನ್ನುವ ನಂಬಿಕೆ ನಮಗಿದೆ ಎಂದು ವಿಶ್ವ ಹಿಂದೂ ಪರಿಷತ್ ನ ಪ್ರಮುಖ ಮತ್ತು ಜಿಲ್ಲಾ ಸಂಪರ್ಕ ಪ್ರಮುಖ್ ಆಶೋಕ್ ಶೆಟ್ಟಿ ಸರಪಾಡಿ ಹೇಳಿದರು. ಈ ಸಂದರ್ಭ ಪನೋಲಿಬೈಲು ಪ್ರಧಾನ ಅರ್ಛಕ ರಮೇಶ್ ಮೂಲ್ಯ ಪನೋಲಿಬೈಲು, ಭಜರಂಗದಳ ಜಿಲ್ಲಾ ಸಂಚಾಲಕ ಗುರುರಾಜ್ ಬಂಟ್ವಾಳ,, ವಿಶ್ವಹಿಂದೂ ಪರಿಷತ್ ಸಜೀಪ ವಲಯ ಅಧ್ಯಕ್ಷ ಜಯಪ್ರಕಾಶ್ ಪೆರ್ವ, ಸಂಚಾಲಕ ದರ್ಶನ್ , ಸಹಸಂಚಾಲಕ ಲೋಹಿತ್ ಪನೋಲಿಬೈಲು, ಪ್ರಮುಖರಾದ ರಮೇಶ್ ಕುಲಾಲ್ ಪನೋಲಿಬೈಲು, ಸಂದೀಪ್ ಬೊಳ್ಳಾಯಿ , ಹರ್ಷಿತ್ ಮಿತ್ತಮಜಲು, ಬಾಸ್ಕರ ಸಜೀಪ, ರಾಜೇಶ್ ಸಜೀಪ, ದೀಪಕ್ ಸಜೀಪ, ಗಣೇಶ್ ಕಾರಾಜೆ, ಆಶೋಕ್ , ಯಾದವ್ ಕುಡುಮುನ್ನೂರು, ಅಶ್ವಿನ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *