ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಮತ್ತು ಮಹದಾಯಿ ವಿವಾದದಲ್ಲಿ ನ್ಯಾಯಾಲಯ ನೀಡಿದ ತೀರ್ಪನ್ನು ಖಂಡಿಸಿ, ಕನ್ನಡ ಒಕ್ಕೂಟ ಗುರುವಾರ ರೈಲ್ವೆ ಬಂದ್ಗೆ ಕರೆ ನೀಡಿದೆ. ಬಂದ್ ಕರೆ ಹಿನ್ನಲೆಯಲ್ಲಿ ರೈಲ್ವೆ ನಿಲ್ದಾಣಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ನಿಗದಿತ ವೇಳಾಪಟ್ಟಿಯಂತೆ ರೈಲುಗಳು ಸಂಚಾರ ನಡೆಸಲಿವೆ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ. ಸಂಜೆ 6 ಗಂಟೆಯ ತನಕ ರೈಲ್ವೆ ಬಂದ್ ನಡೆಯಲಿದೆ ಎಂದು ಕನ್ನಡ ಒಕ್ಕೂಟ ಹೇಳಿದೆ. [ಪ್ರಯಾಣಿಕರೇ ಗಮನಿಸಿ, ರೈಲ್ವೆ ಬಂದ್ ಬಗ್ಗೆ ಆತಂಕ ಬೇಡ]
