ಮಂಗಳಪದವು: ಮಂಗಳಪದವು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಎಂ ರೋಹಿತಾಶ್ವರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ದ. ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಜೆ. ಆರ್. ಡಿ. ಸೋಜಾ ಸಂಘದ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು.

m-p-1

ನೂತನ ವಿಸ್ತರಣಾಧಿಕಾರಿ ಪ್ರತಿಭಾ ಶೆಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು. 2015-16 ನೇ ಸಾಲಿನಲ್ಲಿ ಹಾಲು ಹಾಕಿದ ಸದಸ್ಯರಿಗೆ ಲೀಟರ್ ಒಂದಕ್ಕೆ 0.7750 ಪೈಸೆ ಬೋನಸ್ ಮತ್ತು 0.135 ಪೈಸೆಯಂತೆ ಹೆಚ್ಚುವರಿ ದರ ವ್ಯತ್ಯಾಸದ ಬೋನಸ್ ಘೋಷಿಸಲಾಯಿತು.

ಸಂಘದ ಉಪಾಧ್ಯಕ್ಷ ರಮೇಶ್ಚಂದ್ರ, ನಿರ್ದೇಶಕರುಗಳಾದ ಪದ್ಮನಾಭ ರೈ, ಕೃಷ್ಣಪ್ಪ ಗೌಡ, ಶೀನಪ್ಪ ನಾಯ್ಕ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ವಿನಯ ಎಂ ಸ್ವಾಗತಿಸಿ ವರದಿ ವಾಚಿಸಿದರು. ನಿರ್ದೇಶಕ ಕರುಣಾಕರ ವಂದಿಸಿದರು, ವಸಂತ ಬಂಗೇರ ನಿರೂಪಿಸಿದರು. ಸಿಬ್ಬಂದಿವರ್ಗದವರು ಸಹಕರಿಸಿದರು.

By suddi9

Leave a Reply

Your email address will not be published. Required fields are marked *