ಮೂಡುಬಿದಿರೆ: ಜೈನ್ ಮಿಲನ್ ಮೂಡುಬಿದಿರೆ ಶಾಖೆಯ ಆಶ್ರಯದಲ್ಲಿ ಗುರುಗಳ ಬಸದಿಯಲ್ಲಿ ದಶಲಕ್ಷಣ ಪರ್ವ ಹಾಗೂ ಜೈನ್ ಮಿಲನ್ ಸಭೆ ನಡೆಯಿತು. ಅಜಿತ ಕುಮಾರ ಕೊಕ್ರಾಡಿ ಸಂಯಮ ಧರ್ಮದ ಮಹತ್ವವನ್ನು ತಿಳಿಸಿದರು.
ಜೈನ್ ಮಿಲನ್ ವಲಯ ನಿರ್ದೇಶಕ ಜಯರಾಜ ಕಂಬಳಿ ಅವರು ಡಿಸೆಂಬರ್ ತಿಂಗಳಲ್ಲಿ ನಡೆಯುವ ಕರಾವಳಿ ಮಿಲನೋತ್ಸವದ ಕುರಿತು ಮಾತನಾಡಿದರು. ಸುಧಾಕರ ಬಿ. ನೇತೃತ್ವದಲ್ಲಿ ಧಾರ್ಮಿಕ ರಸ ಪ್ರಶ್ನೆನಡೆಯಿತು . ಸಮಾರಂಭದಲ್ಲಿ ವಿದ್ಯಾರ್ಥಿವೇತನ ವಿತರಿಸಲಾಯಿತು.
ಜೈನ್ ಮಿಲನ್ ಅಧ್ಯಕ್ಷ ಧನಕೀರ್ತಿ ಬಲಿಪ ಅಧ್ಯಕ್ಷತೆ ವಹಿಸಿದ್ದರು. ಯುವರಾಜ ಹೆಗ್ಡೆ ಉಪಸ್ಥಿತರಿದ್ದರು. ಪ್ರೇಮ ಜಿನರಾಜ ಇಂದ್ರ ಸ್ವಾಗತಿಸಿದರು. ಕಾರ್ಯದರ್ಶಿ ನಮಿರಾಜ ಜೈನ್ ವರದಿ ವಾಚಿಸಿದರು. ಎಂ. ವಿನಯ ಕುಮಾರ ಕಾರ್ಯಕ್ರಮ ನಿರೂಪಿಸಿದರು. ಹರಿಶ್ವಂದ್ರ ಜೈನ್ ವಂದಿಸಿದರು.
