ಬಂಟ್ವಾಳ: ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಿಯ ಬಗ್ಗೆ ಮತ್ತು ಹಿಂದು ದೇವರುಗಳ ಬಗ್ಗೆ ಬಿ.ಸಿ.ರೋಡಿನ ಮತಾಂಧ ಜಬ್ಬಾರ್ ಮತ್ತು ಅವನ ಸಹಚರರು ಅವಹೇಳನಕಾರಿಯಾಗಿ ಮತ್ತು ಅಶ್ಲೀಲ ಪದಗಳಿಂದ ನಿಂಧಿಸಿರುವುದು ಶ್ರೀ ಕ್ಷೇತ್ರಕ್ಕೆಅಪಮಾನ ಮತ್ತು ಹಿಂದೂ ಧರ್ಮಕ್ಕೆ ಅವಮಾನ ಉಂಟಾಗಿರುತ್ತದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮಜರಗಿಸಲು ಮತ್ತು ಆರೋಪಿಯನ್ನು ಪತ್ತೆ ಹಚ್ಚಲು ಇಲಾಖೆಗೆ ಪ್ರೇರಣೆ ನೀಡುವ ಸಲುವಾಗಿ ಶಕ್ತಿಯನ್ನು ನೀಡುವಂತೆ ಪಾಣೆಮಂಗಳೂರಿನ ಮೊಗರ್ನಾಡು ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ನರಿಕೊಂಬು ಮತ್ತು ಶಂಭೂರು ಗ್ರಾಮಸ್ಥರಿಂದ ಸಾಮೂಹಿಕ ಪ್ರಾಥನೆ ಭಾನುವಾರ ಬೆಳಗ್ಗೆ ನಡೆಯಿತು.
ನರಿಕೊಂಬು ಮತ್ತು ಶಂಭೂರು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಗ್ರಾಮಸ್ಥರು ಗ್ರಾಮದ ವಿವಿಧೆಡೆಯಿಂದ ಭಜನೆಯಾಡುತ್ತಾ ಪಾದಯಾತ್ರೆಯ ಮೂಲಕ ಮೊಗರ್ನಾಡು ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಆಗಮಿಸಿ ಬಳಿಕ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

1

2
ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಜನಾರ್ದನ ವಾಸುದೇವ ಭಟ್ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿ, ಈ ಕಾರ್ಯಕ್ರಮ ಯಾವುದೇ ಪ್ರತಿಭಟನೆಯಾಗಿರದೆ ಧರ್ಮದ ಹಾಗೂ ದೇವರುಗಳನ್ನು ಕೆಟ್ಟದಾಗಿ ಚಿತ್ರಿಸುವವರಿಗೆ ದೇವರೇ ಪ್ರತಿಫಲ ಮತ್ತು ಇನ್ನು ಮುಂದೆ ಯಾವುದೇ ಇಂತಹ ತಪ್ಪುಗಳನ್ನು ಮಾಡದಂತೆ ಬುದ್ಧಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸುವ ಕಾರ್ಯಕ್ರಮವಾಗಿದೆ ಎಂದರು. ಪೋಳಲಿ ವೆಂಕ್ಕಪ್ಪಯ್ಯ ಭಟ್ ಮತ್ತು ಮಕ್ಕಳು, ನಾಟಿ ಕೇಶವ ಶಾಂತಿ ಪುರೊಹಿತರು, ರಾಮ್‍ದಾಸ ಬಂಟ್ವಾಳ, ರಘು ಸಪಲ್ಯ, ಕೇಶವ ಪಿ.ಎಚ್., ಆನಂದ ಶಂಭೂರು, ಶ್ರೀರಾಮಾಂಜನೇಯ ಶಂಭೂರು, ಶ್ರೀರಾಮ ಭಜನಾಮಂದಿರ ಶಂಭೂರು, ನಾಟಿ ಕೋದಂಡರಾಮ ದೇವಸ್ಥಾನ, ಭಗವಾನ್ ಶ್ರೀ ಕೋದಂಡರಾಮ ಭಜನಾಮಂದಿರ ಎರಮಲೆ, ಕೋದಂಡರಾಮ ಭಜನಾಮಂದಿರ ಅಂತರ ರಾಮ ನಗರ, ಗೆಳೆಯರ ಬಳಗ ಕಲ್ಲ್ಯಾರ್, ಮಹಾಮಾಹಿ ದೇವಸ್ಥಾನ ಅಬ್ಬಯಮಜಲು, ವೀರಮಾರುತಿ ಭಜನಾಮಂದಿರ ಮಾರುತಿ ನಗರ, ನವಜೀವನ ಗೇಮ್ಸ್ ಕ್ಲಬ್ ಕುರ್ಚಿಪಲ್ಲ, ಶ್ರೀ ದೇವಿ ಯುವಕ ಮಂಡಲ ನಾಯ್ಲ, ಯುವ ಸಂಗಮ ಯುವಕ ಮಂಡಲ ಶೇಡಿಗುರಿ, ಓಂ ಶ್ರೀ ಗೆಳೆಯರ ಬಳಗ ನಾಯ್ಲಾ, ಮರ್ದೋಲಿ ಫ್ರೆಂಡ್ಸ್ ಮರ್ದೋಲಿ, ನರಿಕೊಂಬು ಯುವಕ ಮಂಡಳ, ಗ್ರಾಮಾಭಿವೃದ್ಧಿ ಒಕ್ಕೂಟ ನರಿಕೊಂಬು, ಅಂಜನದೇವಿ ಮಹಿಳಾ ಮಂಡಲ ಶಂಭೂರು, ರಿಕ್ಷಾ ಚಾಲಕ ಮಾಲಕರ ಸಂಘ ಪಾಣೆಮಂಗಳೂರು ಶಂಭೂರು ಇವುಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *